ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆತ್ತವರಿಗೂ ಸಮಪಾಲು ಸಿಗಲಿ

Last Updated 27 ಫೆಬ್ರುವರಿ 2019, 20:15 IST
ಅಕ್ಷರ ಗಾತ್ರ

ಮಂಡ್ಯದ ಯೋಧ ಗುರು ಅವರ ಕುಟುಂಬದಲ್ಲಿ ಪರಿಹಾರ ಧನದ ಬಗ್ಗೆ ಕಲಹ ಏರ್ಪಟ್ಟು ಪೊಲೀಸ್ ಠಾಣೆವರೆಗೆ ಹೋಗಿದ್ದು ವಿಷಾದನೀಯ.ಒಬ್ಬ ಮಗನನ್ನು ಬೆಳೆಸುವಲ್ಲಿ ತಂದೆ ತಾಯಿಯ ಪರಿಶ್ರಮ, ತ್ಯಾಗ ದೊಡ್ಡದು. ಅದನ್ನು ದುಡ್ಡಿನಿಂದ ಅಳೆಯಲಾಗದು. ಅವರನ್ನು ತನ್ನ ಉಸಿರಿರುವವರೆಗೆ ಜೋಪಾನ ಮಾಡುವುದು ಬೆಳೆದ ಮಗನ ಆದ್ಯ ಕರ್ತವ್ಯ. ಆದರೆ ದುಡಿಯುವ ಮಗನೇ ಇಲ್ಲದೆಹೋದರೆ ಆ ಮುದಿ ಜೀವಿಗಳ ಗತಿಯೇನು?

ವಯಸ್ಸಿಗೆ ಬಂದ ಮಗನ ಮದುವೆ ಮಾಡುವುದು ತಂದೆ ತಾಯಿಯ ಕರ್ತವ್ಯ. ಆದರೆ ಹೆಂಡತಿ ಬರುತ್ತಲೇ ಮಗನ ಮೇಲಿನ ಎಲ್ಲ ರೀತಿಯ ಹಕ್ಕು, ಅಧಿಕಾರದಿಂದ ಹೆತ್ತವರು ವಂಚಿತರಾಗುತ್ತಿರುವುದು ತಪ್ಪು. ಮಡಿದ ವ್ಯಕ್ತಿಯ ಹೆಂಡತಿ, ಮಕ್ಕಳನ್ನು ಮಾತ್ರ ಅಧಿಕೃತ ವಾರಸುದಾರರನ್ನಾಗಿ ಕಾನೂನು ಮಾನ್ಯ ಮಾಡುತ್ತದೆ ಮತ್ತು ಎಲ್ಲ ಪರಿಹಾರಗಳು ಅವರಿಗೇ ಸಿಗುತ್ತಿವೆ. ಇದರಿಂದ ಆ ವ್ಯಕ್ತಿಯ ಇತರ ಅವಲಂಬಿತರ ಗತಿಯೇನು? ಇಡೀ ಜೀವನವನ್ನೇ ಆತನಿಗಾಗಿ ತೇಯ್ದ ಹೆತ್ತವರಿಗೆ ಬೆಲೆ ಇಲ್ಲವೇ?

ಹುತಾತ್ಮ ಯೋಧರ ಹೆತ್ತವರು ಬೀದಿಗೆ ಬಂದು, ಪರಿಹಾರಧನ, ಸೌಲಭ್ಯಗಳನ್ನು ಪಡೆದ ಹೆಂಡತಿ, ಮಕ್ಕಳು ಸುಖವಾಗಿ ಬದುಕುತ್ತಿರುವ ಉದಾಹರಣೆಗಳಿವೆ. ಹೀಗಾಗಿ, ಬರುವ ಪರಿಹಾರದಲ್ಲಿ ಹುತಾತ್ಮ ಯೋಧನ ಮಕ್ಕಳ ವಿದ್ಯಾಭ್ಯಾಸ, ಮದುವೆ ಖರ್ಚು ಕಳೆದು, ಉಳಿದದ್ದರಲ್ಲಿ ಆತನ ತಾಯಿ ಮತ್ತು ಹೆಂಡತಿಗೆ ಸಮಪಾಲು ನೀಡುವುದೇ ಸರಿಯಾದ ನ್ಯಾಯ.ಈ ಕುರಿತು ಕಾನೂನು ತಿದ್ದುಪಡಿಯಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT