ದೊಡ್ಡ ಛತ್ರದಲ್ಲಿ ವೈಭವದಿಂದ ತಮ್ಮ ಮದುವೆ ನಡೆಯಬೇಕೆಂದು ಹಲವರು ಬಯಸುತ್ತಾರೆ. ಹಣ ಉಳ್ಳವರು ಶ್ರೀಮಂತಿಕೆಯನ್ನು ಪ್ರದರ್ಶಿಸುತ್ತಾ ದೊಡ್ಡ ಛತ್ರಗಳಲ್ಲಿ ತಮ್ಮ ಮಕ್ಕಳ ವಿವಾಹ ಮಾಡುತ್ತಾರೆ. ಆದರೆ ಆರ್ಥಿಕವಾಗಿ ಹಿಂದುಳಿದವರು ಗಂಡಿನ ಮನೆಯವರನ್ನು ಮೆಚ್ಚಿಸುವುದಕ್ಕಾಗಿ, ಕೂಡಿಟ್ಟ ಹಣದ ಜೊತೆಗೆ ಸಾಲ ಮಾಡಿಯಾದರೂ ದೊಡ್ಡ ಛತ್ರದಲ್ಲಿ ಮಕ್ಕಳ ಮದುವೆ ಮಾಡಿಕೊಟ್ಟು, ಸಾಲಗಾರರಾಗಿ ಜೀವನಪರ್ಯಂತ ಕಷ್ಟಪಡುತ್ತಾರೆ. ಸರಳ ವಿವಾಹವನ್ನು ಬಹುತೇಕ ಗಂಡಿನ ಮನೆಯವರು ಒಪ್ಪುವುದಿಲ್ಲ. ಇಂತಹ ಸಾಮಾನ್ಯ ವರ್ಗದವರ ಹಿತದೃಷ್ಟಿಯಿಂದ ಸರ್ಕಾರವು ಕಲ್ಯಾಣ ಮಂಟಪಗಳನ್ನು ನಿರ್ಮಿಸಿ ರಿಯಾಯಿತಿ ದರದಲ್ಲಿ ಬಳಕೆಗೆ ನೀಡಬೇಕು.