ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ | ನೈತಿಕ ಶಿಕ್ಷಣ: ನಿಜ ಸ್ವರೂಪ ಪಡೆಯಲಿ

Last Updated 12 ಜನವರಿ 2023, 19:31 IST
ಅಕ್ಷರ ಗಾತ್ರ

ಭಾರತವೆಂಬ ಬಹುಧರ್ಮ ರಾಷ್ಟ್ರದಲ್ಲಿ ನೈತಿಕ ಶಿಕ್ಷಣಕ್ಕೆ ಹಲವಾರು ಕವಲುಗಳಿವೆ. ಅವುಗಳೇ ಹಿಂದೂ ಧರ್ಮದ ಭಗವದ್ಗೀತೆ, ಮುಸ್ಲಿಂ ಧರ್ಮದ ಕುರಾನ್, ಕ್ರೈಸ್ತ ಧರ್ಮದ ಬೈಬಲ್ ಮುಂತಾದವು. ಎಲ್ಲ ಧರ್ಮಗಳು ಸತ್ಯ, ಅಹಿಂಸೆ, ಪರೋಪಕಾರವನ್ನೇ ಪ್ರತಿಪಾದಿಸುತ್ತವೆ ಎಂಬುದನ್ನು ನಾವಿಲ್ಲಿ ಮುಖ್ಯವಾಗಿ ಗಮನಿಸಬೇಕಾಗಿದೆ. ಆದಕಾರಣ ಒಂದೇ ಧರ್ಮಗ್ರಂಥದಿಂದ ನೈತಿಕ ಶಿಕ್ಷಣವನ್ನು ಅಳವಡಿಸುವುದರ ಬದಲು ಅನುಭವಿ ತಂಡ ರಚಿಸಿ, ಈ ಎಲ್ಲ ಧರ್ಮಗ್ರಂಥಗಳಿಂದ ವಿಚಾರ, ತತ್ವಗಳನ್ನು ಸಮಾನವಾಗಿ ಹೆಕ್ಕಿ ತೆಗೆದು ನೈತಿಕ ಶಿಕ್ಷಣವನ್ನು ಜಾರಿಗೊಳಿಸಬೇಕು. ಆಗ ಯಾವುದೇ ಗೊಂದಲ, ಅನುಮಾನಗಳಿಲ್ಲದೆ ನೈತಿಕ ಶಿಕ್ಷಣವು ಅದರ ನಿಜ ಸ್ವರೂಪವನ್ನು ಪಡೆಯಬಹುದು.

-ಪ್ರಭು ಬ. ನೀಲಿ, ಮುಧೋಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT