ಮಾತೃಭಾಷೆಯ ವ್ಯಾಕರಣಕ್ಕೆ ಇರಲಿ ಅವಕಾಶ
ರಾಷ್ಟ್ರೀಕೃತ ಬ್ಯಾಂಕುಗಳ ನೇಮಕಾತಿ ಪರೀಕ್ಷೆಗಳನ್ನು ಪ್ರಾದೇಶಿಕ ಭಾಷೆಗಳಲ್ಲೂ ಬರೆಯಲು ಅವಕಾಶ ನೀಡಬೇಕೆಂಬ ಬೇಡಿಕೆಯ ಪರಿಶೀಲನೆಗೆ ಕೇಂದ್ರ ಸರ್ಕಾರವು ಸಮಿತಿ ರಚಿಸಿರುವುದನ್ನು (ಪ್ರ.ವಾ., ಜುಲೈ 14) ತಿಳಿದು ಖುಷಿಯಾಯಿತು. ಆದರೆ ರಾಜ್ಯ ಸರ್ಕಾರವು ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ಪರೀಕ್ಷೆಯಲ್ಲಿ ಮಾತೃಭಾಷೆಯನ್ನೇ ಭಾಷಾ ವಿಷಯವಾಗಿ ಆಯ್ಕೆ ಮಾಡಿಕೊಳ್ಳಲು ಇರುವ ಸಮಸ್ಯೆ ಬಗ್ಗೆ (ಕೇವಲ ಪರೀಕ್ಷೆ ಮಾಧ್ಯಮವಾಗಿ ಅಲ್ಲ) ಕೇಂದ್ರ ಸರ್ಕಾರಕ್ಕೆ ಅರಿಕೆ ಮಾಡಿಲ್ಲ. ಈಗಿರುವ ನಿಯಮದಂತೆ, ಹಿಂದಿ ಭಾಷಿಕರು ತಮ್ಮ ಮಾತೃಭಾಷೆಯ ವ್ಯಾಕರಣ ಆಯ್ಕೆ ಮಾಡಿಕೊಂಡು ದೇಶದ ಯಾವುದೇ ರಾಜ್ಯದಲ್ಲಿ ಪರೀಕ್ಷೆ ಬರೆದು ಆಯ್ಕೆಯಾಗಬಹುದು. ಆದರೆ ಕನ್ನಡವೂ ಸೇರಿದಂತೆ ಉಳಿದ ಪ್ರಾದೇಶಿಕ ಭಾಷಿಕರು ಇಂಗ್ಲಿಷ್ ವ್ಯಾಕರಣವನ್ನು ಮಾತ್ರ ಆಯ್ಕೆ ಮಾಡಿಕೊಳ್ಳಬೇಕಾದ ಅನಿವಾರ್ಯ ಇದೆ. ಕನ್ನಡಿಗರು ಕರ್ನಾಟಕದಲ್ಲಿ ಸ್ವಂತ ಭಾಷೆ ಆಯ್ಕೆ ಮಾಡಿಕೊಳ್ಳುವಂತಿಲ್ಲ. ಆದರೆ ಹಿಂದಿ ಭಾಷಿಕರು ಹಿಂದಿ ಆಯ್ಕೆ ಮಾಡಿಕೊಳ್ಳಬಹುದು! ಇದೆಂತಹ ಸಮಾನತೆ?
ಕೇಂದ್ರ ಸರ್ಕಾರವು ಎಲ್ಲ ಪ್ರಾದೇಶಿಕ ಅಭ್ಯರ್ಥಿಗಳಿಗೆ ಅವರ ಮಾತೃಭಾಷೆಯ ವ್ಯಾಕರಣ ಆಯ್ಕೆ ಮಾಡಿಕೊಳ್ಳಲು ಅವಕಾಶವಾಗುವಂತೆ ನಿಯಮ ತಿದ್ದುಪಡಿ ಮಾಡಬೇಕು ಅಥವಾ ಎಲ್ಲಾ ಭಾಷಿಕರಿಗೆ ಇರುವಂತೆ ಹಿಂದಿ ಭಾಷಿಕರಿಗೂ ಇಂಗ್ಲಿಷ್ ಭಾಷಾ ವ್ಯಾಕರಣ ಕಡ್ಡಾಯ ಮಾಡಬೇಕು.
- ವಿಶ್ವನಾಥ ಕೆ.ಜಿ., ಎಂ.ಬಿ.ಅಯ್ಯನಹಳ್ಳಿ, ಕೂಡ್ಲಿಗಿ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.