ಶುಕ್ರವಾರ, ನವೆಂಬರ್ 15, 2019
26 °C

ಸಂಸದರು ಖುದ್ದು ಭೇಟಿ ನೀಡಲಿ

Published:
Updated:

‘ನೆರೆ ಪರಿಹಾರಕ್ಕಾಗಿ ಕೇಂದ್ರದ ಮೊರೆ ಹೋಗುವ ಅಗತ್ಯವಿಲ್ಲ, ರಾಜ್ಯ ಸರ್ಕಾರವೇ ಆರ್ಥಿಕವಾಗಿ ಸದೃಢವಾಗಿದೆ’ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.

ಅವರು ಒಂದು ದಿನ ಬಿಡುವು ಮಾಡಿಕೊಂಡು ನೆರೆ ಸಂತ್ರಸ್ತ ಊರುಗಳಿಗೆ ಭೇಟಿ ನೀಡಿ, ಅಲ್ಲಿ ಎಷ್ಟೊಂದು ನಷ್ಟ ಸಂಭವಿಸಿದೆ ಎಂಬುದನ್ನು ಖುದ್ದು ನೋಡಲಿ. ಆಗ ಅವರಿಗೆ ರಾಜ್ಯ ಸರ್ಕಾರ ಎಷ್ಟು ನಷ್ಟವನ್ನು ಭರಿಸಿ ಅಭಿವೃದ್ಧಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ, ಇನ್ನೂ ಎಷ್ಟು ಹಣದ ಅವಶ್ಯಕತೆ ಇದೆ ಎಂಬುದು ತಿಳಿಯುತ್ತದೆ.

ರಾಜ್ಯ ಸರ್ಕಾರ ಆರ್ಥಿಕವಾಗಿ ಅಷ್ಟೊಂದು ಸದೃಢವಾಗಿದ್ದರೆ ಸಮರೋಪಾದಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಂಡು ನೊಂದ ಜೀವಗಳಿಗೆ ಆಸರೆಯಾಗಬೇಕಿತ್ತು. ಅದನ್ನು ಬಿಟ್ಟು ಇಷ್ಟು ದಿನ ಏಕೆ ಕೇಂದ್ರದ ಕಡೆಗೆ ಮುಖ ಮಾಡಿ ಸುಮ್ಮನೆ ಸಮಯ ವ್ಯರ್ಥ ಮಾಡುತ್ತಿತ್ತು?

ರಾಜು ಬಿ. ಲಕ್ಕಂಪುರ, ಜಗಳೂರು

ಪ್ರತಿಕ್ರಿಯಿಸಿ (+)