ಬುಧವಾರ, ಆಗಸ್ಟ್ 10, 2022
21 °C

ಸರಳ ದಸರಾಗೇಕೆ ಕೋಟ್ಯಂತರ ಹಣ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರಿನಲ್ಲಿ ದಸರಾವನ್ನು ಈ ಬಾರಿ ಬಹಳ ಸರಳವಾಗಿ ಆಚರಿಸಲು ಸರ್ಕಾರ ನಿರ್ಧರಿಸಿರುವುದು ಎಲ್ಲರೂ ಮೆಚ್ಚುವಂತಹದ್ದು. ಕೊರೊನಾ ವಿರುದ್ಧ ಹೋರಾಡುತ್ತಿರುವ ಸ್ಥಳೀಯ ಆಡಳಿತ ವರ್ಗದವರಿಗೂ ಅದ್ಧೂರಿ ಆಚರಣೆಗೆ ವ್ಯವಸ್ಥೆ ಮಾಡುವುದು ಕಷ್ಟವಾಗುತ್ತಿತ್ತು. ಹಾಗಾಗಿ ಸರಳ ಆಚರಣೆ ಸಮಂಜಸ. ಜೊತೆಗೆ ಲಕ್ಷಾಂತರ ಜನ ಒಂದು ಕಡೆ ಸೇರುವುದು ಕೊರೊನಾ ಸೋಂಕು ವ್ಯಾಪಕವಾಗಿರುವ ಈ ಸಂದರ್ಭದಲ್ಲಿ ಸೂಕ್ತವೂ ಅಲ್ಲ. ಇನ್ನು ದಸರಾ ಉದ್ಘಾಟನೆಯನ್ನು ಕೋವಿಡ್ ಹೋರಾಟದಲ್ಲಿ ಮುಂಚೂಣಿಯಲ್ಲಿರುವವರ ಕೈಯಲ್ಲಿ ಮಾಡಿಸಲು ತೀರ್ಮಾನಿಸಿರುವುದರಿಂದ ಆ ವರ್ಗದಲ್ಲಿ ಆತ್ಮವಿಶ್ವಾಸ ಹೆಚ್ಚಾಗಬಹುದು.

ಅರಮನೆಗಷ್ಟೇ ಸೀಮಿತವಾಗಿರುವ ದಸರಾ ಮೆರವಣಿಗೆ ಮತ್ತು ಚಾಮುಂಡಿ ಬೆಟ್ಟದಲ್ಲಿ ಆಚರಣೆ ಹೊರತುಪಡಿಸಿ, ಉಳಿದೆಲ್ಲಕ್ಕೂ ಕಡಿವಾಣ ಹಾಕಲಾಗಿದೆ. ಆದಾಗ್ಯೂ ಸರ್ಕಾರದ ವತಿಯಿಂದ ₹ 10 ಕೋಟಿ ಹಾಗೂ ಮೈಸೂರು ನಗರ ಅಭಿವೃದ್ಧಿ ಪ್ರಾಧಿಕಾರದಿಂದ ₹ 5 ಕೋಟಿ ಕೊಡಲಾಗುತ್ತಿದೆ. ಇಷ್ಟೊಂದು ಅನುದಾನ ಯಾಕಾಗಿ?

ಉಳಿಕೆಯಾದ ಹಣವನ್ನು ಆಸ್ಪತ್ರೆಗೆ ವಿನಿಯೋಗಿಸಬೇಕು ಎಂಬ ಸಲಹೆ ನೀಡಲಾಗಿದೆಯಂತೆ. ಇಷ್ಟೆಲ್ಲಾ ಹೇಳುವವರು, ಒಟ್ಟು ದಸರಾಕ್ಕೆ ಇಷ್ಟು ಅನುದಾನ ಕೊಡುತ್ತೇವೆ, ಸರಳ ದಸರಾ ಎಂದು ತೀರ್ಮಾನ ಮಾಡಿರುವುದರಿಂದ ಉಳಿದ ಹಣವನ್ನು ಕೋವಿಡ್ ವಿರುದ್ಧದ ಹೋರಾಟಕ್ಕೆ ಬಳಸಲಾಗುತ್ತದೆ ಎಂದು ಹೇಳಿದ್ದರೆ ಅದಕ್ಕೊಂದು ಅರ್ಥ ಇರುತ್ತಿತ್ತು. ಆದರೆ ಈಗ ಎಲ್ಲಾ ಕೊಟ್ಟು ಉಳಿದರೆ ಆಸ್ಪತ್ರೆಗೆ ಎಂದರೆ ಅದಕ್ಕೆ ಅರ್ಥವಿಲ್ಲ.

–ಹರವೆಸಂಗಣ್ಣ ಪ್ರಕಾಶ್, ಹರವೆ, ಚಾಮರಾಜನಗರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು