ಇಂದಿರಾ ಕ್ಯಾಂಟೀನ್ ಹೆಸರು ಬದಲಾಯಿಸುವ ಈಗಿನ ಪ್ರಸ್ತಾವದಿಂದ ಹಿಡಿದು ಕೇಂದ್ರದಿಂದ ಈಗಾಗಲೇ ಮೊಟೇರಾ ಸ್ಟೇಡಿಯಂನ ಹೆಸರನ್ನು ಬದಲಿಸಿರುವುದು ಸಂಪಾದಕೀಯದಲ್ಲಿ (ಪ್ರ.ವಾ., ಆ. 9) ವಿಶ್ಲೇಷಿಸಿರುವಂತೆ ಒಂದು ರಾಜಕೀಯ ಚೇಷ್ಟೆಯೇ ಸರಿ.

ಇವೆಲ್ಲಾ ರಾಜಕಾರಣಿಗಳ ಬಾಲಿಶ ನಡೆಗಳಿಗೆ ಸಾಕ್ಷಿಯಲ್ಲದೆ ಮತ್ತೇನು? ಆಡಳಿತ ಪಕ್ಷ ಬದಲಾದಂತೆಲ್ಲಾ ಸ್ಟೇಡಿಯಂಗಳು, ಪ್ರಶಸ್ತಿ ಪದಕಗಳು, ಸರ್ಕಾರಿ ಯೋಜನೆಗಳ ಹೆಸರುಗಳು ಹೀಗೆ ಬದಲಾಗುತ್ತಿದ್ದರೆ, ಯಾವುದಾದರೂ ಐತಿಹಾಸಿಕ ಪಂದ್ಯ ನಡೆದ ಸ್ಟೇಡಿಯಂ ನೋಡಲು ವಿದೇಶಿ ಪ್ರವಾಸಿಗನೊಬ್ಬ ದಶಕಗಳ ನಂತರ ಬಂದು ಹುಡುಕಿದರೆ ಅವನಿಗೆ ಗೊಂದಲವಾಗುವುದು ಸಹಜ. ಇದೇ ರೀತಿ ಬೇರೆ ದೇಶದವರೂ ರಾಜಕೀಯ ಮೇಲಾಟದಲ್ಲಿ ತೊಡಗಿದ್ದಿದ್ದರೆ ಇಂಗ್ಲೆಂಡ್‌ನಲ್ಲಿ 1814ರಲ್ಲಿ ಸ್ಥಾಪಿಸಲಾದ ಲಾರ್ಡ್ಸ್ ಕ್ರೀಡಾಂಗಣವಾಗಲಿ, ಒಂದು ಶತಮಾನದಷ್ಟು ಹಳೆಯದಾದ ಆಸ್ಟ್ರೇಲಿಯಾದ ಮೆಲ್ಬರ್ನ್ ಕ್ರಿಕೆಟ್ ಗ್ರೌಂಡ್ ಆಗಲಿ ಇಷ್ಟು ಹೊತ್ತಿಗೆ ಏನೋ ಬೇರೆ ಹೆಸರಿನದ್ದಾಗಿರುತ್ತಿದ್ದವು ಅಲ್ಲವೇ?

ರವಿಕಿರಣ್ ಶೇಖರ್,ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.