ಬುಧವಾರ, ನವೆಂಬರ್ 13, 2019
28 °C

ಕಷ್ಟಗಳನ್ನೂ ನೆನಪಿಸಿಕೊಳ್ಳಲಿ

Published:
Updated:

ಪ್ರಧಾನಿ ನರೇಂದ್ರ  ಮೋದಿಯವರು ಸೆ. 17ರ ತಮ್ಮ ಹುಟ್ಟುಹಬ್ಬದಂದು ಕಲ್ಯಾಣ ಕರ್ನಾಟಕ ದಿನೋತ್ಸವವನ್ನು ನೆನಪಿಸಿಕೊಂಡಿರುವುದನ್ನು ನೋಡಿ ಸಂತೋಷವಾಯಿತು.

ಬಸವಣ್ಣ ಮತ್ತು ಅವರ ವಚನಗಳನ್ನು ಮೋದಿಯವರು ಆಗಾಗ ತಮ್ಮ ಮಾತುಗಳಲ್ಲಿ ಉದಾಹರಿಸುವುದು ಸ್ವಾಗತಾರ್ಹ. ಈ ನೆನಪಿನ ಜೊತೆಗೆ ಅತಿವೃಷ್ಟಿ ಮತ್ತು ಪ್ರವಾಹದಿಂದ ಉತ್ತರ ಕರ್ನಾಟಕದ ಜನರ ಬದುಕು ಬಯಲಿಗೆ ಬಿದ್ದಿರುವುದನ್ನೂ ಅವರು ನೆನಪಿಸಿಕೊಳ್ಳಬೇಕು. ಈವರೆಗೂ ಈ ಸಂಬಂಧದ ಪರಿಹಾರ ಧನ ಬಿಡುಗಡೆ ಮಾಡದಿರುವುದು ವಿಷಾದಕರ. ಎಲ್ಲ ಒಳ್ಳೆಯದರ ಜೊತೆಗೆ ಜನರ ಸಂಕಷ್ಟಗಳತ್ತಲೂ ಗಮನಹರಿಸಿ ತಕ್ಷಣ ಹಣ ಬಿಡುಗಡೆ ಮಾಡಿದರೆ, ಆಗ ನಿಜವಾಗಿಯೂ ರಾಜ್ಯವು ‘ಕಲ್ಯಾಣ ಕರ್ನಾಟಕ’ ಆದೀತು.

- ಕೊಂಪಿ ಗುರುಬಸಪ್ಪ, ಬೆಂಗಳೂರು

ಪ್ರತಿಕ್ರಿಯಿಸಿ (+)