ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡಿತಗೊಂಡ ಪಠ್ಯಕ್ರಮ: ಲಭ್ಯವಾಗದ ಮಾಹಿತಿ

ಅಕ್ಷರ ಗಾತ್ರ

ಕೊರೊನಾ ಕಾರಣದಿಂದ ಶಾಲೆಗಳು ಆರಂಭವಾಗದಿರುವುದರಿಂದ, ಶಾಲೆಗಳು ತಂತ್ರಜ್ಞಾನ ಆಧಾರಿತ ಬೋಧನೆ ನಡೆಸುತ್ತಿವೆ. ಆದರೆ, ಈ ಶೈಕ್ಷಣಿಕ ವರ್ಷ ಪೂರ್ಣಪ್ರಮಾಣದಲ್ಲಿ ಲಭ್ಯವಾಗುತ್ತಿಲ್ಲದ ಕಾರಣ, ಶಿಕ್ಷಣ ಇಲಾಖೆಯು ಪಠ್ಯಕ್ರಮವನ್ನು ಕಡಿತಗೊಳಿಸುವುದಾಗಿ ತಿಳಿಸಿದೆ. ಅದು ಅನಿವಾರ್ಯ ಕೂಡ. ಆದರೆ, ಕಡಿತಗೊಂಡ ಪಠ್ಯಕ್ರಮದ ಪಟ್ಟಿ ಶಿಕ್ಷಕರಿಗೆ ಇನ್ನೂ ಅಧಿಕೃತವಾಗಿ ತಲುಪಿಲ್ಲ. ಇದರಿಂದ ಈಗ ಮಾಡುತ್ತಿರುವ ಪಾಠಗಳು ಕಡಿತಗೊಂಡರೆ, ಮಕ್ಕಳ ಓದು ಮತ್ತು ಬರವಣಿಗೆಯ ಸಮಯವು ಅಪವ್ಯಯವಾದಂತಾಗುತ್ತದೆ.

ಹತ್ತನೇ ತರಗತಿಯ ವಿದ್ಯಾರ್ಥಿಗಳಿಗಂತೂ ಶಾಲೆ ಪುನರಾರಂಭವಾದಾಗ, ಉಳಿದ ಪಾಠಗಳನ್ನು ಕಲಿತು, ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುವುದು ಕಷ್ಟವಾಗುತ್ತದೆ. ಹಾಗಾಗಿ ಕಲಿಕೆಯ ಹಿತದೃಷ್ಟಿಯಿಂದ ಸರ್ಕಾರವು ಕಡಿತಗೊಂಡ ಪಠ್ಯಕ್ರಮದ ಮಾಹಿತಿಯನ್ನು ಶಾಲಾ ಆರಂಭಕ್ಕೂ ಮುನ್ನವೇ ಶಿಕ್ಷಕರಿಗೆ ನೀಡಬೇಕು. ಕಡಿತಗೊಂಡ ಪಠ್ಯಗಳನ್ನು ಹೊರತುಪಡಿಸಿ, ಈ ವರ್ಷ ಇರುವ ಪಾಠಗಳತ್ತ ಮಾತ್ರ ಗಮನ ಹರಿಸಿದರೆ ಮಕ್ಕಳ ಕಲಿಕೆಗೆ ಅನುಕೂಲವಾಗುತ್ತದೆ ಮತ್ತು ಸಮಯದ ಸದುಪಯೋಗವಾಗುತ್ತದೆ.

ಅನೀಶ್ ಬಿ., ಕೊಪ್ಪ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT