ರಾಜ್ಯ ಗ್ರಂಥಾಲಯ ಇಲಾಖೆ ಅನುಷ್ಠಾನಗೊಳಿಸಿರುವ ಡಿಜಿಟಲ್ ಗ್ರಂಥಾಲಯ ಯೋಜನೆಗೆ 5 ಲಕ್ಷಕ್ಕೂ ಅಧಿಕ ಮಂದಿ ನೋಂದಾಯಿಸಿಕೊಂಡಿರುವುದು ಶ್ಲಾಘನೀಯ. ಇದು ನಮ್ಮ ರಾಜ್ಯದಲ್ಲಿನ ಓದುಗರ ಆಸಕ್ತಿ ಹಾಗೂ ತಂತ್ರಜ್ಞಾನದೆಡೆಗೆ ಅವರು ತೋರುತ್ತಿರುವ ಒಲವನ್ನು ಬಿಂಬಿಸುತ್ತದೆ. ಡಿಜಿಟಲ್ ಗ್ರಂಥಾಲಯವನ್ನು ಮೊಬೈಲ್ ಮೂಲಕ ವೀಕ್ಷಿಸುವ ಇ - ಸಾರ್ವಜನಿಕ ಗ್ರಂಥಾಲಯ ಆ್ಯಪ್‌ನಲ್ಲಿ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದ ಉಪಯುಕ್ತ ಮಾಹಿತಿಯುಳ್ಳ ಅನೇಕ ಪುಸ್ತಕಗಳು ಲಭ್ಯವಿವೆ.

ಇಂದಿನ ಕೊರೊನಾ ಕಾಲದಲ್ಲಿ ಈ ವ್ಯವಸ್ಥೆಯು ಓದುಗರಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಆದರೆ ಈ ಆ್ಯಪ್ ನಿರ್ವಹಿಸಲು ಇಂಟರ್ನೆಟ್ ಅತ್ಯವಶ್ಯಕ. ಇದರಿಂದ, ನೆಟ್‌ವರ್ಕ್ ಸಮಸ್ಯೆ ಎದುರಿಸುತ್ತಿರುವ ಗ್ರಾಮೀಣ ಭಾಗದ ಅನೇಕ ಉತ್ಸಾಹಿ ಓದುಗರಿಗೆ ಈ ಸೌಲಭ್ಯದ ಪರಿಪೂರ್ಣ ಪ್ರಯೋಜನ ಲಭ್ಯವಾಗುತ್ತಿಲ್ಲ. ಆದ್ದರಿಂದ ಆ್ಯಪ್‌ನಲ್ಲಿ ಪುಸ್ತಕಗಳನ್ನು ಡೌನ್‌ಲೋಡ್ ಮಾಡಿಕೊಂಡು ಆಫ್‌ಲೈನ್‌ನಲ್ಲಿ ಓದುವ ವ್ಯವಸ್ಥೆ ಕಲ್ಪಿಸಿದರೆ ಇನ್ನೂ ಅನೇಕ ಓದುಗರಿಗೆ ಅನುಕೂಲವಾಗುತ್ತದೆ.

ಅಂಕಿತ್ ಜಿ.ಎನ್., ತೀರ್ಥಹಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.