ಅಪಾಯಕಾರಿ ಕಳೆನಾಶಕ ನಿಷೇಧಿಸಿ

ಬುಧವಾರ, ಏಪ್ರಿಲ್ 24, 2019
33 °C

ಅಪಾಯಕಾರಿ ಕಳೆನಾಶಕ ನಿಷೇಧಿಸಿ

Published:
Updated:

ರಾಜ್ಯದಲ್ಲಿ ಮಾರಾಟವಾಗುತ್ತಿರುವ ‘ರೌಂಡಪ್’ ಎನ್ನುವ ಕಳೆನಾಶಕದ ದುಷ್ಪರಿಣಾಮಗಳ ಬಗ್ಗೆ ಎಚ್ಚೆತ್ತುಕೊಂಡಿರುವ ಸರ್ಕಾರ, ಇದರಿಂದ ಆಗಿರಬಹುದಾದ ಅನಾಹುತಗಳ ಬಗ್ಗೆ ತನಿಖೆಗೆ ಮುಂದಾಗಿರುವುದು ಸ್ವಾಗತಾರ್ಹ.

ಈ ಕಳೆನಾಶಕದಲ್ಲಿ ಗ್ಲೈಪೋಸೆಟ್ ಎಂಬ ರಾಸಾಯನಿಕವು ಹೆಚ್ಚಿನ ಪ್ರಮಾಣದಲ್ಲಿ ಸಂಯೋಜನೆಗೊಂಡಿದೆ. ಇದರ ಬಳಕೆಯಿಂದ ಮಣ್ಣಿನ‌ ಫಲವತ್ತತೆ ಹಾಗೂ ಇಳುವರಿ ಕಡಿಮೆಯಾಗುವ ಸಾಧ್ಯತೆ ಇದೆ ಎಂಬುದರ ಜೊತೆಗೆ, ಇದು ಮನುಷ್ಯನಿಗೂ ರೋಗಕಾರಕವೆಂದು ವಿದೇಶಿ ವರದಿಗಳು ಅಭಿಪ್ರಾಯಪಟ್ಟಿವೆ.

ಗ್ಲೈಪೋಸೆಟ್ ರಾಸಾಯನಿಕ ವಸ್ತುವಿನೊಂದಿಗೆ ಕಳೆನಾಶಕ ತಯಾರು ಮಾಡುವ ಅನೇಕ ಕಂಪನಿಗಳಿವೆ. ಈ ರಾಸಾಯನಿಕ ವಸ್ತುವಿಲ್ಲದೆ ಯಾವುದೇ ಕಳೆನಾಶಕ ತಯಾರಿಸಲು ಸಾಧ್ಯವಿಲ್ಲ ಎನ್ನುವುದಾದರೆ, ಇತರೆ ಬ್ರ್ಯಾಂಡಿನ ಕಳೆನಾಶಕಗಳು ಕೂಡ ಅಷ್ಟೇ ದುಷ್ಪರಿಣಾಮ ಬೀರುತ್ತವೆ ಎಂದಾಯಿತು.

ಅನೇಕ ರಾಷ್ಟ್ರಗಳಲ್ಲಿ ಈಗಾಗಲೇ ಇಂತಹ ಅಪಾಯಕಾರಿ ಕಳೆನಾಶಕಗಳನ್ನು ನಿಷೇಧಿಸಿ ಪರ್ಯಾಯ ಮಾರ್ಗ ಕಂಡುಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ನಮ್ಮ ಸರ್ಕಾರವೂ ಕ್ರಮ ಕೈಗೊಳ್ಳಲಿ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !