ಬಿಎಂಶ್ರೀ ಪ್ರತಿಷ್ಠಾನಕ್ಕೆ ಸಂಬಂಧಿಸಿದಜಾಗದ ಗುತ್ತಿಗೆ ನವೀಕರಣಕ್ಕೆ ಬೃಹತ್ ಬೆಂಗಳೂರು ಮಹಾನಗರಪಾಲಿಕೆಯು (ಬಿಬಿಎಂಪಿ) ಮೀನಮೇಷ ಎಣಿಸುತ್ತಿರುವುದು (ಪ್ರ.ವಾ., ಜುಲೈ 10) ದುರ್ದೈವದ ಸಂಗತಿ. ಈ ಕುರಿತಂತೆ ದಿವಂಗತ ಡಾ. ಚಿದಾನಂದಮೂರ್ತಿಯವರ ನೇತೃತ್ವದಲ್ಲಿ ಮುಖ್ಯಮಂತ್ರಿಯವರನ್ನು ಕಂಡಿದ್ದ ನಿಯೋಗದಲ್ಲಿ ನಾನೂ ಇದ್ದೆ. ಪ್ರತಿಷ್ಠಾನದ ಹಿಂದಿನ ಅಧ್ಯಕ್ಷನಾಗಿ ನಾನು ಎಡೆಬಿಡದೆ ಹಲವಾರು ವರ್ಷಗಳಿಂದ ಪ್ರಯತ್ನ ನಡೆಸಿದ್ದರೂ ಫಲಪ್ರದವಾಗದ ಕಾರ್ಯ ಈಗ ಕೈಗೂಡುತ್ತದೆ ಎಂಬ ಆಸೆಯು ಮುಖ್ಯಮಂತ್ರಿಯವರ ಆಶ್ವಾಸನೆಯಿಂದ ಉಂಟಾಗಿತ್ತು. ಆದರೆ ಇಷ್ಟು ತಿಂಗಳಾದರೂ ಅವರ ಭರವಸೆಗೂ ಬೆಲೆಯಿಲ್ಲವಾಗಿರುವುದು ದುರ್ದೈವ.

ಪ್ರತಿಷ್ಠಾನದ ಕೆಲಸದ ಬಗೆಗಿನ ಪ್ರಶಂಸೆಯು ಬಿಬಿಎಂಪಿಯ ಕೌನ್ಸಿಲ್ ಸಭೆ ತೆಗೆದುಕೊಂಡ ನಿರ್ಣಯದಲ್ಲಿ ಉಲ್ಲೇಖಗೊಂಡಿರುವುದನ್ನು ಆಯುಕ್ತರು ಗಮನಿಸಬೇಕು. ಸದರಿ ಸಂಸ್ಥೆಯಿರುವ ರಸ್ತೆಗೆ ‘ಬಿಎಂಶ್ರೀ ಪ್ರತಿಷ್ಠಾನದ ರಸ್ತೆ’ ಎಂದು ಬಿಬಿಎಂಪಿಯೇ ಈಚೆಗೆ ನಾಮಕರಣ ಮಾಡಿದೆ. ಇದನ್ನು ಗಮನಿಸಿ ಆಯುಕ್ತರು ತಕ್ಷಣವೇ ಕಾರ್ಯೋನ್ಮುಖರಾಗಿ, ಜಾಗವನ್ನು ಪ್ರತಿಷ್ಠಾನಕ್ಕೆ ಹಿಂದಿನ ದರದಲ್ಲೇ ದೀರ್ಘಾವಧಿಗೆ ನವೀಕರಣ ಮಾಡಿಕೊಡಬೇಕು.

ಡಾ. ಪಿ.ವಿ.ನಾರಾಯಣ,ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.