ಗುರುವಾರ , ಸೆಪ್ಟೆಂಬರ್ 23, 2021
20 °C

ಲೇಖನಿ ಹಿಡಿಯಬೇಕಾದ ಕೈಯಲ್ಲಿ ಹಾರೆ, ಗುದ್ದಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕರ್ನಾಟಕದ ‘ಪಂಚನದಿಗಳ ನಾಡು’ ಎಂದು ಹೆಸರಾಗಿರುವ ವಿಜಯಪುರ ಜಿಲ್ಲೆಯು ಶಿಕ್ಷಣದಲ್ಲಿ ಕಳಪೆ ಸಾಧನೆ ತೋರುತ್ತಿರುವುದು ನೋವಿನ ಸಂಗತಿ. ಶಾಲಾ ಹಂತ ಮುಗಿದ ಕೂಡಲೇ ಮಕ್ಕಳನ್ನು ದುಡಿಮೆಗೆ ದೂಡುವ ಪ್ರವೃತ್ತಿ ಇರುವುದು ಈ ಭಾಗದ ದುರ್ದೈವ. ಇದಕ್ಕೆ ಬಡತನವೇ ಕಾರಣ. ಇರುವ ಅಲ್ಪಸ್ವಲ್ಪ ಜಮೀನಿನಲ್ಲಿ ಏನಾದರೂ ಬೆಳೆಯಬೇಕೆಂದರೆ ನೀರಾವರಿ ಸೌಕರ್ಯ ಇಲ್ಲ. ಮಕ್ಕಳನ್ನು ಪೋಷಕರು ದುಡಿಯಲು ಹೊರ ರಾಜ್ಯಗಳಿಗೆ ಕಳುಹಿಸುತ್ತಾರೆ. ಹೀಗಾಗಿ, ಲೇಖನಿ ಹಿಡಿಯಬೇಕಾದ ಕೈಗಳು ಹಾರೆ, ಗುದ್ದಲಿ ಹಿಡಿಯಬೇಕಾಗಿ ಬಂದಿದೆ.

ಶಾಲೆಯಲ್ಲಿ ತರಗತಿಗಳು ಸಮರ್ಪಕವಾಗಿ ನಡೆಯದಿರುವುದು, ಶಿಕ್ಷಕರು ಮತ್ತು ಮಕ್ಕಳ ನಡುವೆ ಹೊಂದಾಣಿಕೆ ಕೊರತೆ, ಪಠ್ಯೇತರ ಚಟುವಟಿಕೆಯಲ್ಲಿ ತೊಡಗಿಸದಿರುವುದು... ಇವೆಲ್ಲವೂ ಶಾಲಾ ಕಾಲೇಜುಗಳ ನೂನ್ಯತೆಯಾಗಿದ್ದು, ಅಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕಾಗಿದೆ.

-ಮಹಾಂತೇಶ ಎಮ್. ಯಂಕಂಚಿ, ಸಿಂದಗಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು