ಶುಕ್ರವಾರ, ಮೇ 27, 2022
21 °C

ವಾಚಕರ ವಾಣಿ: ರಾಜಕೀಯ ತಂತ್ರಗಾರಿಕೆ ಹೊಸದಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜ್ಯದ ಮುಖ್ಯಮಂತ್ರಿ ಆಗುವವರಿಗೆ ಪಕ್ಷದ ಬೊಕ್ಕಸಕ್ಕೆ ಗಣನೀಯ ಧನಸಹಾಯ ಮಾಡುವ ಸಾಮರ್ಥ್ಯ ಇರಬೇಕು ಎನ್ನುವುದು ಬಹುತೇಕ ಎಲ್ಲಾ ಪಕ್ಷಗಳಲ್ಲಿ ಇರುವ ಅಲಿಖಿತ ನಿಯಮ ಎನ್ನುವುದು ಎಲ್ಲರಿಗೂ ತಿಳಿದ ಸತ್ಯ ಮತ್ತು ಲಾಗಾಯ್ತಿನಿಂದ  ಕೇಳುತ್ತಿರುವ ಮಾತು. ಇದನ್ನು ಬಸನಗೌಡ ಪಾಟೀಲ ಯತ್ನಾಳ ತಮ್ಮದೇ ಧಾಟಿಯಲ್ಲಿ ಹೇಳಿದ್ದಾರೆ. ಯತ್ನಾಳ ಇದನ್ನು ಇನ್ನೂ ಸವಿಸ್ತಾರವಾಗಿ ಹೇಳಿ, ಇದರ ಹಿಂದೆ ಇರುವ ದೆಹಲಿ ದೊರೆಗಳ ಹೆಸರನ್ನೂ ಬಹಿರಂಗಪಡಿಸಿದ್ದರೆ ಅವರ ಹೇಳಿಕೆಗೆ ಇನ್ನೂ ತೂಕ ಬರುತ್ತಿತ್ತು.

‘ಹಿಟ್‌ ಆ್ಯಂಡ್‌ ರನ್‌’ ಮಾಡುವ ಅವರ ರಾಜಕೀಯ ನಡೆ ಮತ್ತು ಸಮಯ ಬಂದಾಗ ಎಲ್ಲವನ್ನೂ ಹೇಳುತ್ತೇನೆ ಎನ್ನುವ ರಾಜಕೀಯ ತಂತ್ರಗಾರಿಕೆ, ಅವರು ಸತ್ಯವನ್ನು ಹೇಳಿದರೂ ಜನ ಅವುಗಳನ್ನು ರಾಜಕೀಯ ಸ್ಟಂಟ್‌ ಎಂದು ನೋಡುವಂತೆ ಮಾಡುತ್ತವೆ.

ರಮಾನಂದ ಶರ್ಮಾ, ಬೆಂಗಳೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು