ಜಾತ್ಯತೀತ: ತಪ್ಪು ವ್ಯಾಖ್ಯಾನ ಸಲ್ಲದು

‘ನಾನು ಒಕ್ಕಲಿಗ ಎಂದು ಗುರುತಿಸಿಕೊಳ್ಳುತ್ತೇನೆ. ಎಲ್ಲರೂ ಅವರವರ ಜಾತಿಯಿಂದ ಗುರುತಿಸಿಕೊಳ್ಳುತ್ತಾರೆ. ಹಾಗಾಗಿ, ಜಾತ್ಯತೀತ ಎಂಬುದಕ್ಕೆ ಅರ್ಥವಿಲ್ಲ’ ಎಂದು ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ ಹೇಳಿದ್ದಾರೆ (ಪ್ರ.ವಾ, ಜೂನ್ 30). ಈ ಮೂಲಕ ಅವರು, ಭಾರತದ ಸಂವಿಧಾನದ ಪ್ರಸ್ತಾವನೆ ಯಲ್ಲಿರುವ ‘ಜಾತ್ಯತೀತ’ ಪದವನ್ನು ತಪ್ಪಾಗಿ ವ್ಯಾಖ್ಯಾನಿಸಿದ್ದಾರೆ.

ಭಾರತದಂತಹ ಬಹುತ್ವದ ದೇಶದಲ್ಲಿ ಜಾತ್ಯತೀತತೆಯ ತತ್ವವನ್ನು ಆಚರಿಸದಿದ್ದರೆ ಪ್ರಜಾಪ್ರಭುತ್ವ ವ್ಯವಸ್ಥೆಯು ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತದೆ. ಜಾತ್ಯತೀತ ಎಂಬ ಪದವು ಧರ್ಮವಿರೋಧಿ, ಜಾತಿವಿರೋಧಿ ಎಂಬ ಅರ್ಥವನ್ನು ನೀಡುವುದಿಲ್ಲ. ಯಾವ ರಾಜ್ಯವು (ಸ್ಟೇಟ್) ಧರ್ಮದಿಂದ ಸಂಪೂರ್ಣವಾಗಿ ಪ್ರತ್ಯೇಕವಾಗಿರುವುದೋ ಹಾಗೂ ತನ್ನದೇ ಆದ ಧರ್ಮವನ್ನು ಹೊಂದಿರುವುದಿಲ್ಲವೋ ಅಂತಹ ರಾಜ್ಯವನ್ನು ಜಾತ್ಯತೀತ ರಾಷ್ಟ್ರ ಎನ್ನಬಹುದಾಗಿದೆ. ಜಾತಿ, ಮತ, ಧರ್ಮ, ಭಾಷೆ ಇವುಗಳ ಆಧಾರದ ಮೇಲೆ ತಾರತಮ್ಯ ಮಾಡದೆ ಹಾಗೂ ಎಲ್ಲಾ ಪ್ರಜೆಗಳಿಗೆ ಧಾರ್ಮಿಕ ಸ್ವಾತಂತ್ರ್ಯವನ್ನು ನೀಡುವುದು ಜಾತ್ಯತೀತ ರಾಷ್ಟದ ಪರಿಕಲ್ಪನೆಯಾಗಿದೆ. ಭಾರತದ ಪ್ರತಿಯೊಬ್ಬ ಪ್ರಜೆ ಜಾತಿ, ಧರ್ಮದಿಂದ ಗುರುತಿಸಿಕೊಳ್ಳುವುದು ಸಹ ‘ಜಾತ್ಯತೀತತೆ’ಯ ಭಾಗವಾಗಿಯೇ. ಧರ್ಮ ಮತ್ತು ರಾಜಕಾರಣವನ್ನು ಬೇರ್ಪಡಿಸಬೇಕೆಂಬ ವಿಶಾಲಾರ್ಥದಲ್ಲಿ ಈ ಪದವನ್ನು ಪ್ರಸ್ತಾವನೆಯಲ್ಲಿ ಸೇರಿಸಲಾಗಿದೆ ಎಂಬುದನ್ನು ಇಂದಿನ ರಾಜಕಾರಣಿಗಳು ಅರಿಯಬೇಕಿದೆ.

⇒ನಾಗರಾಜ ಮಗ್ಗದ, ಕೊಟ್ಟೂರು

ಮೂಲತತ್ವಗಳ ಬದಲಾವಣೆ ಅಸಾಧ್ಯ

‘ಅಂಬೇಡ್ಕರ್ ಸಂವಿಧಾನದಲ್ಲಿ ಜಾತ್ಯತೀತ ಪದವೇ ಇಲ್ಲ’ ಎನ್ನುವ ಆರ್. ಅಶೋಕ ಅವರ ಹೇಳಿಕೆ ಓದಿ ಆಶ್ಚರ್ಯವಾಯಿತು. ನಮ್ಮ ಸಂವಿಧಾನವು ವಿಧಿ 368ರಲ್ಲಿ ಸಂವಿಧಾನದಲ್ಲಿ ಅಂತರ್ಗತವಾಗಿರುವ 8 ಅಂಶಗಳನ್ನು ಯಾವುದೇ ರೀತಿಯಲ್ಲಿ ತಿದ್ದುಪಡಿ ಮಾಡಲು ಸಂಸತ್ತಿಗೆ ಅಧಿಕಾರ ನೀಡುವುದಿಲ್ಲ. ಅದರಲ್ಲಿ ಈ ದೇಶದ ‘ಧರ್ಮನಿರಪೇಕ್ಷ ಸ್ವರೂಪ’ವೂ ಸೇರಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಸುಪ್ರೀಂ ಕೋರ್ಟ್ ಸಂವಿಧಾನದ ಮೂಲ ತತ್ವಗಳನ್ನು ಪಟ್ಟಿಮಾಡಿದೆ. ಈ ಮೂಲ ತತ್ವಗಳಲ್ಲಿ ‘ಧರ್ಮನಿರಪೇಕ್ಷತೆ ಮತ್ತು ಜಾತ್ಯಾತೀತತೆ’ಯೂ ಸೇರಿವೆ. ‘ಮೂಲತತ್ವಗಳನ್ನು ಬದಲಿಸಲೂ ಆಗದು ಮತ್ತು ತಿದ್ದುಪಡಿ ಮಾಡಲೂ ಆಗದು’ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.

⇒ಚಾವಲ್ಮನೆ ಸುರೇಶ್ ನಾಯಕ್, ಹಾಲ್ಮುತ್ತೂರು

ಶಿಕ್ಷಣ ಕ್ಷೇತ್ರದ ರಾಷ್ಟ್ರೀಕರಣ ಅಗತ್ಯ

‘ಸೋರುವ ಕೊಠಡಿಯಲ್ಲೇ ಕಲಿಕೆ!’ ವರದಿ (ಪ್ರ.ವಾ, ಜೂನ್ 29) ಎಚ್ಚರಿಕೆಯ ಗಂಟೆಯಾಗಿದೆ; ಸರ್ಕಾರಕ್ಕಲ್ಲ, ಜನಸಾಮಾನ್ಯರಿಗೆ. ಬಹುತೇಕ ಶಾಸಕ, ಸಂಸದರು ತಮ್ಮದೇ ಆದ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಹೊಂದಿದ್ದಾರೆ. ದುಃಸ್ಥಿತಿಯಲ್ಲಿ ರುವ ಸರ್ಕಾರಿ ಶಾಲೆಗಳನ್ನು ಸರಿಪಡಿಸಿ, ತಮ್ಮ ಶಾಲೆಗಳ ದಾಖಲಾತಿ ಕಡಿಮೆ ಮಾಡಿಕೊಳ್ಳಲು ಅವರಿಗೇನು ನಾಯಿ ಕಚ್ಚಿಲ್ಲ. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕೆಂಬ ಪ್ರತಿಯೊಬ್ಬ ತಂದೆ ತಾಯಿಯ ಕನಸಿನೊಂದಿಗೆ ಆಟವಾಡುತ್ತಿ ರುವ ರಾಜಕಾರಣಿಗಳ ಕುಟಿಲ ನೀತಿಯ ವಿರುದ್ಧ ಜನರೇ ಧ್ವನಿ ಎತ್ತಬೇಕಾಗಿದೆ. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳ ರಾಷ್ಟ್ರೀಕರಣದ ಅಗತ್ಯವಿದೆ.

⇒ಹಣಮಂತ ಕಾಂಬಳೆ, ಬಾಗಲಕೋಟೆ

ಮುನ್ನೆಚ್ಚರಿಕೆ ಕೊರತೆಯಿಂದ ದುರ್ಘಟನೆ

ಮಲೆ ಮಹದೇಶ್ವರ ವನ್ಯಜೀವಿ ವಿಭಾಗದಲ್ಲಿ ಐದು ಹುಲಿಗಳು ವಿಷಪ್ರಾಶನ ದಿಂದ ಮೃತಪಟ್ಟಿರುವುದು ದುರದೃಷ್ಟಕರ. ಇದಕ್ಕೆ ಕಾರಣರಾದವರ ಕೃತ್ಯ ಅಕ್ಷಮ್ಯ ಅಪರಾಧ. ವನ್ಯಜೀವಿಗಳ ವಾಸಸ್ಥಾನದ ವಲಯಗಳಲ್ಲಿ ಗಸ್ತು ಬಲಪಡಿಸುವಿಕೆ, ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಮೊಕದ್ದಮೆ, ತನಿಖೆಗಾಗಿ ಉನ್ನತ ಮಟ್ಟದ ಸಮಿತಿ ರಚನೆ, ಹೀಗೆಲ್ಲ ಏನೇ ಆದರೂ, ನಡೆದ ದುರಂತವನ್ನು ಸರಿಪಡಿಸಲು ಸಾಧ್ಯವಿಲ್ಲ. ದುರ್ಘಟನೆ ಸಂಭವಿಸಿದ ನಂತರವಷ್ಟೇ ನಾವು ಜಾಗೃತರಾಗುತ್ತೇವೆ.

ಕಾಲ್ತುಳಿತದಂತಹ ಘಟನೆ, ವಿಮಾನ ಅಪಘಾತ ಅಥವಾ ಹುಲಿಗಳ ಸಾವು ಸೇರಿದಂತೆ ಯಾವುದೇ ದುರ್ಘಟನೆಗಳು ಸಂಭವಿಸದಿರಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದು ಅತ್ಯಗತ್ಯ. ಅನಾಹುತ ಆದ ನಂತರ ಪರಿತಪಿಸಿದರೆ ಪ್ರಯೋಜನವಿಲ್ಲ.

⇒ಆಶಾ ಅಪ್ರಮೇಯ, ದಾವಣಗೆರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.