ಕಾಲಹರಣ ಮಾಡಿದರೆ ಶಾಸ್ತಿ

ಯಾವುದೇ ಪಕ್ಷ ಅಧಿಕಾರದಲ್ಲಿದ್ದರೂ ಶ್ರೀಸಾಮಾನ್ಯನ ಬದುಕು ಬದಲಾಗದು ಎಂಬ ಸ್ಥಿತಿಗೆ ಕರ್ನಾಟಕದ ರಾಜಕೀಯ ತಲುಪಿದೆ. ಈ ಹಿಂದೆ ಅಧಿಕಾರಕ್ಕೇರುವ ಮೊದಲು ಬಿಜೆಪಿ ಗಳಿಸಿದ್ದ ಜನರ ಒಲವು ಅವರಲ್ಲಿನ ಆಂತರಿಕ ಕಚ್ಚಾಟದಿಂದ ವಿರೋಧವಾಗಿ ಮಾರ್ಪಾಡಾಗಿತ್ತು. ಅದೀಗ ಕಾಂಗ್ರೆಸ್ ಸರ್ಕಾರಕ್ಕೆ ವರ್ಗಾವಣೆ ಆಗುವಂತಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಮೊದಲ ಅವಧಿಯಲ್ಲಿದ್ದ ಹಿಡಿತವನ್ನು ಈ ಬಾರಿ ಕಳೆದುಕೊಂಡಿದ್ದಾರೆ ಎಂಬುದಕ್ಕೆ ಸಾಲು ಸಾಲು ಉದಾಹರಣೆ
ಇವೆ. ಆದರೆ, ಅದು ಆಡಳಿತ ಯಂತ್ರದ ಮೇಲೆ ಪರಿಣಾಮ ಬೀರುವಷ್ಟರಮಟ್ಟಿಗೆ ಬಂದು ತಲುಪಿರುವುದು ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆ ಅಲ್ಲ. ಕಾಂಗ್ರೆಸ್ ಗೆಲ್ಲಲು ಗ್ಯಾರಂಟಿಗಳು ಎಷ್ಟು ಕಾರಣವೋ, ಬಿಜೆಪಿಯ ಒಡಕು ಮತ್ತು ಬೆಲೆ ಏರಿಕೆಯಂತಹ ಸಮಸ್ಯೆಗಳು ಅಷ್ಟೇ ಕಾರಣವಾಗಿವೆ. ರಾಜ್ಯದ ಜನರಿಗೆ ಗ್ಯಾರಂಟಿ ನೀಡಿದ್ದೇವೆ, ಜನ ನಮ್ಮನ್ನು ಮುಂದಿನ ಬಾರಿಯೂ ಗೆಲ್ಲಿಸುತ್ತಾರೆ ಎಂಬ ಭ್ರಮೆಯಲ್ಲಿ ಕಾಲಹರಣ ಮಾಡಿದರೆ ಮತದಾರರು ಕೈಕೊಡುವುದು ಖಚಿತ.

⇒ಮಣಿಕಂಠ ಪಾ. ಹಿರೇಮಠ, ಬಾಗಲಕೋಟೆ

ಕ್ರೀಡೆಗೆ ಪ್ರೋತ್ಸಾಹ ಬೇಕು

ಶಾಲೆಗಳಿಗೆ 10 ಲಕ್ಷ ಫುಟ್ಬಾಲ್ ವಿತರಣೆ ಮಾಡುವುದಾಗಿ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ (ಪ್ರ.ವಾ., ಜುಲೈ 1). ಫುಟ್ಬಾಲ್ ಕ್ರೀಡೆಯಲ್ಲಿ ಹೆಚ್ಚು ಮಕ್ಕಳು ತೊಡಗುವಂತೆ ಪ್ರೇರೇಪಿಸಲು ಹಾಗೂ ಕ್ರೀಡಾ ಸಂಸ್ಕೃತಿ ಬೆಳೆಸುವ ಉದ್ದೇಶದಿಂದ ಈ ಕ್ರಮ ಸರಿಯಾಗಿದೆ.

ಸ್ವಾಮಿ ವಿವೇಕಾನಂದ ಅವರು, ‘ಭಗವದ್ಗೀತೆ ಓದುವುದಕ್ಕಿಂತ ಫುಟ್ಬಾಲ್ ಆಡುವುದೇ ಉತ್ತಮ’ ಎಂದು ನುಡಿದಿದ್ದರು. ಈಗಲಾದರೂ ಕೇಂದ್ರ ಮತ್ತು ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ಕ್ರೀಡಾ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಬೇಕು. ಜೊತೆಗೆ, ಹದಿಹರೆಯದ ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಆಗಷ್ಟೇ ಆರೋಗ್ಯಪೂರ್ಣ ಯುವ ಮನಸ್ಸುಗಳು ಅರಳಲು ಸಾಧ್ಯ.

⇒ಸತ್ಯಮೂರ್ತಿ, ಬೆಂಗಳೂರು

ಒಂದೇ ಮಾನದಂಡ ಅನುಸರಿಸಿ

ಬೆಂಗಳೂರಿನಲ್ಲಿ ಹಲವೆಡೆ ರಾಜಕಾಲುವೆ ಮೇಲೆ ಪಟ್ಟಭದ್ರರು ಕಟ್ಟಡಗಳನ್ನು ನಿರ್ಮಿಸಿಕೊಂಡಿದ್ದಾರೆ. ಈ ಬಗ್ಗೆ ದೂರು ನೀಡಿದರೂ ಅಧಿಕಾರಿಗಳು ಕ್ರಮ ಕೈಗೊಳ್ಳದಿರು ವುದು ದುರದೃಷ್ಟಕರ (ಪ್ರ.ವಾ., ಜುಲೈ 1). ಈ ಹಿಂದೆ ಕೆಲವೆಡೆ ರಾಜಕಾಲುವೆ ಒತ್ತುವರಿ ತೆರವು ಮಾಡಿದ ಉದಾಹರಣೆಗಳಿವೆ. ಆಗ ಜನಸಾಮಾನ್ಯರು ಹೆಚ್ಚು ತೊಂದರೆ ಅನುಭವಿಸಿದ್ದೂ ಉಂಟು. ಆದರೆ, ತೆರವು ಕಾರ್ಯಾಚರಣೆಯ ಹಿಂದಿನ ತರ್ಕ ನಮಗೆ ಅರ್ಥವಾಗುತ್ತಿಲ್ಲ. ಜನಸಾಮಾನ್ಯರಿಗೂ ಹಾಗೂ ಪ್ರಭಾವಿಗಳಿಗೂ ಒಂದೇ ಮಾನದಂಡ ಅನುಸರಿಸಬೇಕಿದೆ.

⇒ಜಿ.ಪಿ. ದಯಾನಂದ, ಬೆಂಗಳೂರು

ಆಟೊ ದರ: ಕಟ್ಟುನಿಟ್ಟು ನಿಯಮ ಬೇಕು

ಅಧಿಕ ದರ ವಸೂಲಿ ಮಾಡಿದ 114 ಆಟೊಗಳನ್ನು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಜಪ್ತಿ ಮಾಡಿದ್ದಾರೆ (ಪ್ರ.ವಾ., ಜುಲೈ 1). ಆಟೊದವರ ದುಬಾರಿ ದರ ವಸೂಲಿ ಹೊಸತೇನಲ್ಲ. ಬೆಂಗಳೂರಿನ ಬಸ್ ನಿಲ್ದಾಣ ಹಾಗೂ ರೈಲು ನಿಲ್ದಾಣಗಳಲ್ಲಿ ದೂರದ ಊರಿಂದ ಬಂದವರ ಕೈಯಲ್ಲಿ ಲಗೇಜ್ ಇದ್ದರಂತೂ ಆಟೊ ಚಾಲಕರು ಒಂದಾಗಿ ದುಪ್ಪಟ್ಟು ದರ ವಸೂಲಿ ಮಾಡುತ್ತಾರೆ. ರಾತ್ರಿ ವೇಳೆ ಇವರು ಕೇಳುವಷ್ಟೇ ಹಣ ನೀಡಿ ಸಂಚರಿಸಬೇಕಿದೆ.

ಕರಾರುವಕ್ಕಾದ ಮೀಟರ್ಗಳಿಲ್ಲ. ಮೀಟರ್ಗಳನ್ನು ತಪಾಸಣೆ ಮಾಡುವ ತೂಕ ಮತ್ತು ಅಳತೆ ಇಲಾಖೆಯು ಇದೆಯೋ ಇಲ್ಲವೋ ಎಂಬ ಅನುಮಾನ ಕಾಡುತ್ತಿದೆ. ಪ್ರಿಪೇಯ್ಡ್ ಆಟೊ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ನಿಯಮದ ಬಗ್ಗೆ ಮಾತನಾಡಿದರೆ ಆಟೊ ಚಾಲಕರು ಒಂದಾಗಿ ಬಿಡುತ್ತಾರೆ. ಆ್ಯಪ್ ಆಧಾರಿತ ಆಟೊ ಸೇವೆ ಒದಗಿಸುವ ಕಂಪನಿಗಳು ಕೂಡ ಗ್ರಾಹಕರಿಂದ ಹೆಚ್ಚು ಹಣ ವಸೂಲಿ ಮಾಡುತ್ತಿವೆ. ಪ್ರಯಾಣಿಕರ ಹಿತದೃಷ್ಟಿಯಿಂದ ದುಬಾರಿ ಹಣ ವಸೂಲಿ ಮಾಡುವ ಆಟೊ ಚಾಲಕರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕಿದೆ.

⇒ಅತ್ತಿಹಳ್ಳಿ ದೇವರಾಜ್, ಬೆಂಗಳೂರು

ಅಶಿಸ್ತಿನ ಜೀವನಶೈಲಿ ಅಪಾಯಕರ

ರಾಜ್ಯದಲ್ಲಿ ಹೃದಯಾಘಾತಕ್ಕೆ ತುತ್ತಾಗಿ ಮೃತಪಡುತ್ತಿರುವ ಯುವಜನರ ಸಂಖ್ಯೆ ಹೆಚ್ಚುತ್ತಿದೆ. ಇದಕ್ಕೆ ಅಶಿಸ್ತಿನ ಜೀವನಶೈಲಿಯೇ ಪ್ರಮುಖ ಕಾರಣ. ಹೃದಯಾಘಾತಕ್ಕೆ ಇಳಿವಯಸ್ಸಿನವರು ಮಾತ್ರ ಬಲಿಯಾಗುತ್ತಾರೆ ಎಂಬ ಅಸಡ್ಡೆ ಇದೆ. ಇದರಿಂದ ಯುವ ಸಮೂಹವು ಆರೋಗ್ಯ ಪರೀಕ್ಷೆಗೆ ಒಳಗಾಗುವುದಿಲ್ಲ.

ತೋರ್ಪಡಿಕೆಯ ಬದುಕು ಯುವಜನರನ್ನು ಸಾವಿನ ಅಂಚಿಗೆ ದೂಡುತ್ತಿದೆ. ಆರೋಗ್ಯಯುತ ಬದುಕಿನ ಕ್ರಮವನ್ನು ಮಕ್ಕಳಿಗೆ ಬಾಲ್ಯದಲ್ಲಿಯೇ ರೂಢಿಸಬೇಕಿದೆ. ‘ಆರೋಗ್ಯವೇ ಭಾಗ್ಯ’ ಎಂಬ ನಾಣ್ಣುಡಿಯನ್ನು ಯುವಜನರ ಹೃದಯಕ್ಕಿಳಿಸುವುದು ಇಂದಿನ ಅಗತ್ಯವಾಗಿದೆ.

⇒ಸಚಿನ್ ಹೊಳೆಹದ್ದು, ಶೃಂಗೇರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.