ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ‘ರಾಜಭಾಷೆ’ ಹೋಲಿಕೆ ತರವಲ್ಲ

Last Updated 25 ಸೆಪ್ಟೆಂಬರ್ 2020, 19:31 IST
ಅಕ್ಷರ ಗಾತ್ರ

ಹಿಂದಿ ಏಕತಾ ದಿನದಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು, ವಿಶ್ವದಾದ್ಯಂತ ಕೋಟ್ಯಂತರ ಜನ ಬಳಸುವ ಭಾಷೆ ಹಿಂದಿ ಎಂದು ತಮ್ಮ ಟ್ವಿಟರ್‌ನಲ್ಲಿ ಉಲ್ಲೇಖಿಸಿದ್ದಾರೆ. ಎಲ್ಲಾ ಭಾರತೀಯ ಭಾಷೆಗಳನ್ನು ಗೌರವಿಸುವುದಾಗಿ ಹೇಳಿ, ಹಿಂದಿಯನ್ನು ರಾಜಭಾಷೆಗೆ ಹೋಲಿಸಿ ಶುಭಾಶಯ ತಿಳಿಸಿದ್ದಾರೆ. ಕರ್ನಾಟಕದಲ್ಲಿ ರಾಜ್ಯಭಾರ ನಡೆಸಿದ ಕೆಲವು ರಾಜರು, ಭಾಷೆಯನ್ನು ಒಂದು ಸಂವಹನವಾಗಿ ನೋಡಿದರೇ ವಿನಾ ಶ್ರೇಷ್ಠತೆಯ ವ್ಯಸನದಲ್ಲಿ ಬೀಗಲಿಲ್ಲ. ವಿಜಯನಗರದ ಪ್ರಭುತ್ವ ಹಾಗೂ ಮೈಸೂರು ಅರಸರ ಆಳ್ವಿಕೆಯಲ್ಲಿ ಎಲ್ಲಾ ಭಾಷೆಗಳು ಸಮಾನ ಪ್ರಾಮುಖ್ಯ ಪಡೆದಿದ್ದ ವಿಚಾರವನ್ನು ಚರಿತ್ರೆಯ ಮೂಲಕ ಮನಗಾಣಬಹುದು. ಇದು ರಾಜಪ್ರಭುತ್ವದ ಸದಾಶಯಗಳಲ್ಲೊಂದು.

ಈಗ ಪ್ರಜಾಪ್ರಭುತ್ವದಲ್ಲಿ ರಾಷ್ಟ್ರಪತಿಯವರು ಹಿಂದಿಗೆ ರಾಜಭಾಷೆಯ ಸ್ಥಾನ ನೀಡಿರುವುದು ಸಾಧುವಲ್ಲ. ಹಿಂದಿಯ ಬಗ್ಗೆ ಅಭಿಮಾನ ಹೊಂದಿರುವವನಾಗಿ ನನಗೆ ಇದು ಇಷ್ಟವಾಗಬಹುದು. ಆದರೆ, ಕನ್ನಡಿಗನಾಗಿ ಇದು ಅತ್ಯಂತ ಬೇಸರದ ಸಂಗತಿ.

-ಆರ್.ವೆಂಕಟರಾಜು, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT