ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಲಿನ ದರ: ಇರಲಿ ಸಮ ಸಂಖ್ಯೆ

Last Updated 24 ನವೆಂಬರ್ 2022, 19:30 IST
ಅಕ್ಷರ ಗಾತ್ರ

ನಂದಿನಿ ಬ್ರ್ಯಾಂಡ್‌ನ ಎಲ್ಲ ಮಾದರಿಯ ಹಾಲು, ಮೊಸರಿನ ದರವನ್ನು ಪ್ರತೀ ಲೀಟರ್‌ಗೆ ಎರಡು ರೂಪಾಯಿ ಏರಿಸಲಾಗಿದೆ. ಅದರಂತೆ ಟೋನ್ಡ್ ಹಾಲು ₹ 39, ಹಾಗೂ ಸ್ಪೆಷಲ್ ಹಾಲು, ಶುಭಂ ಹಾಲಿನ ಲೀಟರ್ ದರ ತಲಾ ₹ 45 ಹಾಗೂ ಮೊಸರಿನ ದರ ಲೀಟರ್‌ಗೆ ₹ 47 ಇದೆ. ಈ ದರಗಳು ಬೆಸಸಂಖ್ಯೆಯಲ್ಲಿ ಇರುವುದರಿಂದ, ಅರ್ಧ ಲೀಟರ್‌ನ ದರಗಳು ಕ್ರಮವಾಗಿ ₹ 19.50, ₹ 22.50 ಹಾಗೂ ₹ 23.50 ಆಗುತ್ತವೆ. ಹಿಂದಿನ ಬಾರಿಯ ಹೆಚ್ಚಳದಲ್ಲೂ ಇದೇ ಪರಿಸ್ಥಿತಿ ಇತ್ತು. ಈಗ ಐವತ್ತು ಪೈಸೆಯ ನಾಣ್ಯ ಸಂಪೂರ್ಣವಾಗಿ ಮರೆಯಾಗಿರುವುದರಿಂದ ಈ ಹೆಚ್ಚಳ ವರ್ತಕರಿಗೆ ಅನಧಿಕೃತವಾಗಿ ಐವತ್ತು ಪೈಸೆಯ ಲಾಭ ಪಡೆಯಲು ಅನುವು ಮಾಡಿಕೊಡುತ್ತದೆ. ಕರ್ನಾಟಕ ಹಾಲು ಮಹಾಮಂಡಳಕ್ಕೆ (ಕೆಎಂಎಫ್‌) ಇದು ತಿಳಿಯದ್ದೇನೂ ಅಲ್ಲ.

ದಿನವೂ ಅರ್ಧ ಲೀಟರ್‌ನ ಲಕ್ಷಗಟ್ಟಲೆ ಪ್ಯಾಕೆಟ್‌ಗಳು ನಗದು ಪಾವತಿಯ ಮೂಲಕ ಮಾರಾಟವಾಗುತ್ತವೆ. ಬೂತ್‌ಗಳು ಹಾಗೂ ಮಾರಾಟದ ಏಜೆಂಟರು ಈ ಮಾರ್ಗದಲ್ಲಿ ಅನಧಿಕೃತ ಲಾಭ ಗಳಿಸಲು ಹಾದಿ ಮಾಡಿಕೊಟ್ಟಂತಾಗಿದೆ. ಹಾಗಾಗಿ ಕೆಎಂಎಫ್, ಅರ್ಧ ಲೀಟರ್ ಪ್ಯಾಕೆಟ್‌ಗಳ ಬೆಲೆಯನ್ನು ಪೂರ್ಣ ರೂಪಾಯಿಗಳಲ್ಲಿ ನಿರ್ಧರಿಸಬೇಕು. ಕಡಿಮೆ ಮಾಡಿದರೆ ಗ್ರಾಹಕರಿಗೆ ನ್ಯಾಯ, ಹೆಚ್ಚಿಸಿ ಉತ್ಪಾದಕರಿಗೆ ವರ್ಗಾಯಿಸಿದರೆ ಅದೂ ನ್ಯಾಯ.

⇒ಶ್ರೀಧರ ಬಾಣಾವರ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT