ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಮುನ್ನೆಲೆಗೆ ಬರಲಿ ನೈಜ ಶೈಕ್ಷಣಿಕ ಸಮಸ್ಯೆ 

Last Updated 5 ಜೂನ್ 2022, 19:30 IST
ಅಕ್ಷರ ಗಾತ್ರ

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಹಂತದ ರಾಷ್ಟ್ರೀಯ ಸಾಧನೆ ಸಮೀಕ್ಷೆಯ ಅಂಶಗಳು ಪ್ರಕಟಗೊಂಡಿದ್ದು, ವರದಿ ಪ್ರಕಾರ 2021ನೇ ಸಾಲಿನ 3, 5, 8 ಮತ್ತು 10ನೇ ತರಗತಿಯ ಮಕ್ಕಳ ಭಾಷೆ ಹಾಗೂ ಇತರ ವಿಷಯಗಳ ಕಲಿಕೆಯಲ್ಲಿ ಈ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಇಳಿಕೆ ಕಂಡುಬಂದಿದೆ. ಹತ್ತನೇ ತರಗತಿಯ ಆಧುನಿಕ ಭಾರತೀಯ ಭಾಷೆ ಮತ್ತು ಇತರ ವಿಷಯಗಳ ಕಲಿಕೆ, ಗ್ರಹಿಕೆಯ ಮಟ್ಟ ಶೇ 99ರಷ್ಟು ವಿದ್ಯಾರ್ಥಿಗಳಲ್ಲಿ ಸಾಧಾರಣ ಮತ್ತು ಅದಕ್ಕಿಂತ ಕಡಿಮೆ, ಅದೇ ರೀತಿ ಇಂಗ್ಲಿಷ್ ಕಲಿಕೆಯ ಮಟ್ಟ ಕೂಡ ಕಡಿಮೆ ಎಂದು ಹೇಳಲಾಗಿದೆ.

ಪಠ್ಯಗಳಲ್ಲಿ ಕೆಲವು ಪಾಠಗಳನ್ನು ಸೇರಿಸುವುದು, ಪದೇ ಪದೇ ತೆಗೆದುಹಾಕುವುದು ಇದಕ್ಕೆ ಪ್ರಮುಖ ಕಾರಣಗಳು ಎನ್ನಲಾಗಿದೆ. ರಾಜ್ಯದಲ್ಲಿ ಪಠ್ಯಪುಸ್ತಕ ಕುರಿತ ವಿವಾದ ತಾರಕಕ್ಕೇರಿರುವ ಈ ಹೊತ್ತಿನಲ್ಲಿ ಈ ಸಮೀಕ್ಷಾ ವರದಿಯನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಪಠ್ಯವನ್ನು ಬದಲಿಸುವ ಬದಲು ಈಗಾಗಲೇ ಪಠ್ಯದಲ್ಲಿರುವ ಪಾಠಗಳನ್ನು ಮಕ್ಕಳಿಗೆ ಹೇಗೆ ಕಲಿಸಲಾಗುತ್ತಿದೆ, ಅವರು ಪಾಠಗಳನ್ನು ಹೇಗೆ ಕಲಿಯುತ್ತಿದ್ದಾರೆ ಅಥವಾ ಗ್ರಹಿಸುತ್ತಿದ್ದಾರೆ ಎಂಬುದರ ಕುರಿತು ಗಂಭೀರವಾಗಿ ಚಿಂತಿಸಬೇಕಿದೆ. ಈ ಬಗೆಗಿನ ಚರ್ಚೆಗಳು ಕೂಡ ಮುನ್ನೆಲೆಗೆ ಬರಬೇಕಾಗಿದೆ. ಇಲ್ಲದಿದ್ದರೆ ಪಠ್ಯ ಕುರಿತ ವಿವಾದ ಕೇವಲ ಎಡ-ಬಲ ಎಂಬ ವಿವಾದವಾಗಿ, ನೈಜ ಶೈಕ್ಷಣಿಕ ಸಮಸ್ಯೆ ಹಾಗೆಯೇ ಉಳಿಯುತ್ತದೆ.

–ಡಾ. ಮಹೇಶ್ ಮೂರ್ತಿ, ತುಮಕೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT