ಭಾನುವಾರ, ಮೇ 22, 2022
29 °C

ಸ್ಕ್ಯಾನಿಂಗ್ ಘಟಕಕ್ಕೆ ಸಿಗಲಿ ಆದ್ಯತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಹಿಳೆಯರ ಆರೋಗ್ಯ ಸಮಸ್ಯೆಯ ನಿವಾರಣೆಗಾಗಿ ಸರ್ಕಾರಗಳು ಆಯವ್ಯಯದಲ್ಲಿ ಹಣವನ್ನು ಮೀಸಲಿಟ್ಟು, ಕಾಳಜಿ ವಹಿಸುತ್ತವೆ. ಆದರೂ ಜಿಲ್ಲಾ ಆಸ್ಪತ್ರೆ, ಕೆಲವು ತಾಲ್ಲೂಕು ಕೇಂದ್ರಗಳನ್ನು ಹೊರತುಪಡಿಸಿ ಉಳಿದೆಡೆ ಮಹಿಳೆಯರ ಆರೋಗ್ಯ ಚಿಕಿತ್ಸೆಗೆ ಅನಿವಾರ್ಯವಾದ ಸ್ಕ್ಯಾನಿಂಗ್ ಯಂತ್ರಗಳು ಲಭ್ಯವಿಲ್ಲದಿರುವುದು ಮಹಿಳೆಯರನ್ನು ತೊಂದರೆಗೆ ಈಡು ಮಾಡುತ್ತಿದೆ.

ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಬರುವವರು ಅದರಲ್ಲೂ ಗರ್ಭಿಣಿಯರು ಸ್ಕ್ಯಾನಿಂಗ್ ಮಾಡಿಸಲು ಖಾಸಗಿ ಸೆಂಟರ್‌ಗಳಿಗೆ ತೆರಳಬೇಕಾಗುತ್ತದೆ. ಅದು ಸರ್ಕಾರಿ ಆಸ್ಪತ್ರೆಗೆ ಅನತಿ ದೂರದಲ್ಲಿದ್ದರೆ ಸರಿ, ಇಲ್ಲವಾದರೆ ಹತ್ತಾರು ಕಿಲೊಮೀಟರ್‌ಗಟ್ಟಲೆ ಪ್ರಯಾಣಿಸಿ ಸ್ಕ್ಯಾನಿಂಗ್ ಮಾಡಿಸಿಕೊಂಡು ಬರುವ ವೇಳೆಗೆ ವೈದ್ಯರ ಆ ದಿನದ ಕಾರ್ಯಾವಧಿ ಮುಗಿದು ಹೋಗಿರುತ್ತದೆ. ವರದಿ ತೋರಿಸಲು ಮತ್ತೆ ಇನ್ನೊಂದು ದಿನ ಅನಿವಾರ್ಯವಾಗಿ ಆಸ್ಪತ್ರೆಗೆ ಬರಬೇಕಾಗು ತ್ತದೆ. ಇಂತಹ ಸಂದರ್ಭಗಳಲ್ಲಿ ಚಿಕಿತ್ಸೆ ವಿಳಂಬವಾದರೆ ವೈದ್ಯರನ್ನು ದೂಷಿಸುವ ಸಾಧ್ಯತೆಯೂ ಇಲ್ಲದಿಲ್ಲ. ಜಿಲ್ಲಾಸ್ಪತ್ರೆ ಹೊರತುಪಡಿಸಿ ನಗರಗಳು, ಪಟ್ಟಣಗಳು, ಹೋಬಳಿಗಳಲ್ಲಿ ಇರುವ ಎಲ್ಲ ಸಮುದಾಯ ಆಸ್ಪತ್ರೆಗಳಲ್ಲಿಯೂ ಸ್ಕ್ಯಾನಿಂಗ್ ಸೆಂಟರ್‌ಗಳನ್ನು ತೆರೆಯಬೇಕು. ಇದರಿಂದ ಮಹಿಳೆಯರ ಚಿಕಿತ್ಸೆಗೆ ಅನಗತ್ಯ ವಿಳಂಬ ತಪ್ಪುವುದಲ್ಲದೆ ಅವರು ದುಬಾರಿ ಹಣ ತೆರುವುದೂ ತಪ್ಪುತ್ತದೆ.

ಮಹದೇವಪ್ಪ ಪಿ., ಮೈಸೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು