ಬುಧವಾರ, ಏಪ್ರಿಲ್ 21, 2021
25 °C

ಮಾಸ್ತಿ ‘ಆಸ್ತಿ’: ಅಪವ್ಯಾಖ್ಯಾನ ತರವಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾಸ್ತಿಯವರ ಕುರಿತ ‘ಮಾಸ್ತಿ ಕನ್ನಡದ ಆಸ್ತಿ’ ಎನ್ನುವ ಜನಜನಿತ ಹೇಳಿಕೆಯ ಮೂಲ ಆಶಯವು ಸಾಮಾನ್ಯ ಕನ್ನಡಿಗನಿಗೂ ಅರ್ಥವಾಗುವ ಹಾಗಿದೆ. ಹೀಗಿರುವಾಗ, ಮೊಗಳ್ಳಿ ಗಣೇಶ್‌ ಅವರು ‘ಇಲ್ಲಿ ಆಸ್ತಿ ಎನ್ನುವುದು ಅಷ್ಟು ಸೂಕ್ತ ಪದವಲ್ಲ. ಅವರನ್ನು ಆಧುನಿಕ ಸಣ್ಣ ಕಥೆಗಳ ಹೆತ್ತಜ್ಜ ಅಥವಾ ಮುತ್ತಜ್ಜ ಎನ್ನಬಹುದು’ ಎಂದು ಹೇಳಿರುವುದು (ಪ್ರ.ವಾ., ಜೂನ್‌ 30) ಕೂದಲು ಸೀಳುವ ತರ್ಕವಾಗಿ ತೋರುತ್ತದೆ.

‘ಆಸ್ತಿ ಕರಗಿ ಹೋಗುತ್ತದೆ. ಹೀಗಾಗಿ ಮಾಸ್ತಿ ಅವರನ್ನು ಕನ್ನಡ ಕಥಾಲೋಕದ ಅಸ್ತಿಭಾರ ಎನ್ನಬಹುದು ಎಂದಿರುವ ವಸುಧೇಂದ್ರ ಅವರ ಮಾತು ಮತ್ತೂ ಬಾಲಿಶ. ಆಸ್ತಿ ಕರಗುವುದಾದರೆ ಅವರು ಹೇಳುವ ಅಸ್ತಿಭಾರವೂ ಕುಸಿಯದೇ? ಯಾವುದೇ ಹೇಳಿಕೆಯ ಆಶಯವನ್ನು ಕಡೆಗಣಿಸಿ ಅದನ್ನು ಅಕ್ಷರಾರ್ಥಕ್ಕೆ ಇಳಿಸಿ ವ್ಯಾಖ್ಯಾನಿಸುವುದು ಸರಿಯಲ್ಲ. ಯಾವುದರ ಬಗ್ಗೆಯಾದರೂ ಹೊಸ ಹೊಳಹು, ವ್ಯಾಖ್ಯಾನಗಳನ್ನು ಕೊಡುವ ಸ್ವಾತಂತ್ರ್ಯ ಎಲ್ಲರಿಗೂ ಇದೆ. ಹಾಗೆಂದು, ಸ್ಪಷ್ಟ ಉಕ್ತಿಗಳನ್ನು ಅಪವ್ಯಾಖ್ಯಾನಿಸುವ ಅಗತ್ಯವಿದೆಯೇ? ಮಾಸ್ತಿ ಆಸ್ತಿಯಲ್ಲವಾದರೆ ಋಣ ಭಾರವೇ?

-ರಾಜೇಶ್ವರಿ ಲೋಕರೆ, ಬೆಂಗಳೂರು

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು