ಮಂಗಳವಾರ, ಅಕ್ಟೋಬರ್ 15, 2019
26 °C

ಶಸ್ತ್ರಾಸ್ತ್ರಗಳೆಂಬ ಆಯುಧಗಳು!

Published:
Updated:

ಆಯುಧಪೂಜೆಯ ದಿನದಂದು ರಕ್ಷಣಾ ಸಚಿವರು ರಫೇಲ್‌ ಯುದ್ಧ ವಿಮಾನಕ್ಕೆ ಮತ್ತು ಆರ್‌ಎಸ್‌ಎಸ್‌ ಮುಖ್ಯಸ್ಥರು ಶಸ್ತ್ರಾಸ್ತ್ರಗಳಿಗೆ ಪೂಜೆ ಸಲ್ಲಿಸಿದ್ದಾರೆ. ಧಾರ್ಮಿಕ ಸಂಕೇತಗಳು ಅಧಃಪತನಗೊಳ್ಳುತ್ತಿರುವುದಕ್ಕೆ ಇದೊಂದು ಮಾದರಿಯಷ್ಟೇ. ನೇಗಿಲು, ಕತ್ತಿ, ಕುಡುಗೋಲು, ಉಳಿ, ಗರಗಸದಂತಹ ಕೃಷಿ ಮತ್ತು ಕೈಕಸುಬಿನ ಆಯುಧಗಳನ್ನು ಪೂಜಿಸುವ ಮೂಲಕ ಶ್ರಮಜೀವನವನ್ನು ಗೌರವಿಸುವುದಕ್ಕೆ ಸಂಕೇತವಾಗಿದ್ದ ಹಬ್ಬವು, ಯಂತ್ರ ಸಂಸ್ಕೃತಿ ಶುರುವಾದಂತೆ ಅವುಗಳ ಪೂಜೆಯಾಗಿ ಮಾರ್ಪಟ್ಟಿತು.

ಈಗ ಪೊಲೀಸ್‌ ಠಾಣೆಗಳಲ್ಲಿ ಬಂದೂಕುಗಳನ್ನು, ಸೈನಿಕ ತಾಣಗಳಲ್ಲಿ, ಮನುಷ್ಯರನ್ನು ಕೊಲ್ಲುವ– ಹಿಂಸಿಸುವ ಶಸ್ತ್ರಾಸ್ತ್ರಗಳನ್ನು ಪೂಜಿಸುವ ಮಟ್ಟಕ್ಕೆ ಇಳಿದಿರುವುದು ಇಡೀ ಸಮಾಜದ ಅಂತರಂಗದಲ್ಲಿ ತುಂಬಿ ಕೊಳ್ಳುತ್ತಿರುವ ಹಿಂಸೆಗೆ ಸಂಕೇತವಾಗಿರಬಹುದೇ? ಮುಂದಿನ ತಲೆಮಾರುಗಳವರು ಆಯುಧಪೂಜೆಯ ದಿನ ಮನೆಯಲ್ಲಿಯೇ ಪಿಸ್ತೂಲು, ಬಾಂಬುಗಳನ್ನು ಪೂಜಿಸಲು ನಾವು ಈಗಲೇ ಪೀಠಿಕೆ ಹಾಕುತ್ತಿರುವಂತೆ ಕಾಣಿಸುತ್ತದೆ. ಪ್ರಪಂಚದೆಲ್ಲೆಡೆ ಹಿಂಸೆ ಪೂಜ್ಯವಾಗುವ ಜೀವನಶೈಲಿ ರೂಪುಗೊಳ್ಳುವ ಸೂಚನೆಗಳು
ನಿಚ್ಚಳವಾಗುತ್ತಿವೆ.

- ನಡಹಳ್ಳಿ ವಸಂತ್‌, ಶಿವಮೊಗ್ಗ

Post Comments (+)