ಹಳಿ ಏರುವುದೇ ರೈಲ್ವೆ ಯೋಜನೆ?
87 ಕಿ.ಮೀ. ಉದ್ದದ ₹ 1,854 ಕೋಟಿ ವೆಚ್ಚದ ಮೈಸೂರು– ಕುಶಾಲನಗರ ಹೊಸ ರೈಲು ಮಾರ್ಗ ನಿರ್ಮಾಣ ಯೋಜನೆಗೆ ಕೇಂದ್ರ ಸರ್ಕಾರವು ಪರಿಸರವಾದಿಗಳ ವಿರೋಧದ ಮಧ್ಯೆಯೂ ಇತ್ತೀಚೆಗೆ ಅನುಮತಿ ನೀಡಿದೆ.
ಪರಿಸರವಾದಿಗಳ ವಿರೋಧದಿಂದ, ಈವರೆಗೆ ಸುಮಾರು ₹ 300 ಕೋಟಿ ವೆಚ್ಚವಾಗಿರುವ ಹುಬ್ಬಳ್ಳಿ– ಅಂಕೋಲಾ ರೈಲು ಯೋಜನೆಯು ನ್ಯಾಯಾಲಯದ ತಡೆಯ ಮೂಲಕ ಹಳಿ ತಪ್ಪಿರುವಾಗ, ಇಂತಹುದೇ ಯೋಜನೆಗೆ ಸರ್ಕಾರ ಅನುಮತಿ ನೀಡಿರುವುದು ತೀರಾ ಆಶ್ಚರ್ಯ. ಪ್ರಸ್ತಾವಿತ ಮೈಸೂರು– ಕುಶಾಲನಗರ ರೈಲು ಯೋಜನೆಯು ಹುಬ್ಬಳ್ಳಿ– ಅಂಕೋಲಾ ರೈಲು ಯೋಜನೆಯಂತೆ ಅರಣ್ಯ ಪ್ರದೇಶದಲ್ಲಿ ಹಾದು ಹೋಗುವುದರಿಂದ ಈ ಯೋಜನೆಯೂ ಹಳಿ ಏರುವುದು ಸಂದೇಹ.
ರಮಾನಂದ ಶರ್ಮಾ, ಬೆಂಗಳೂರು
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.