ಹಸಿವು ನಿವಾರಣೆ: ‘ಸುಪ್ರೀಂ’ ಅತ್ಯುತ್ತಮ ನಡೆ
ಹಸಿವು ಮತ್ತು ಅಪೌಷ್ಟಿಕತೆ ನೀಗಿಸಲು ಸಮುದಾಯ ಭೋಜನಾಲಯಗಳ ಸ್ಥಾಪನೆಗೆ ಸಂಬಂಧಿಸಿದಂತೆ ಯೋಜನೆ ರೂಪಿಸಲು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಮೂರು ವಾರಗಳ ಗಡುವು ನೀಡಿರುವುದು ಒಂದು ಅತ್ಯುತ್ತಮ ನಡೆ. ಆದರೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಲಕ್ವ ಹೊಡೆಸಿಕೊಂಡಂತೆ ಶೋಚನೀಯ ಸ್ಥಿತಿ ತಲುಪಿವೆ. ಚುನಾವಣಾ ಸಂದರ್ಭಗಳನ್ನು ಹೊರತುಪಡಿಸಿ ಮಿಕ್ಕ ದಿನಗಳಲ್ಲಿ ಕಣ್ಣನ್ನೂ ಸೇರಿಸಿ ಮುಖಗವಸು ಹಾಕಿಕೊಂಡು ಕೂತುಬಿಡುತ್ತವೆ. ಸಾರ್ವಜನಿಕರ ದಿನನಿತ್ಯದ ಬಳಕೆಯ ಅಡುಗೆ ಅನಿಲದ ಸಬ್ಸಿಡಿಯನ್ನೇ ಕಿತ್ತುಕೊಂಡ ಸರ್ಕಾರ, ಜನರ ದೈನಂದಿನ ಬದುಕಿನ ಪದಾರ್ಥಗಳ ಮೇಲೆ ಗದಾಪ್ರಹಾರ ಮಾಡಿದೆ. ಸರ್ಕಾರದ ಇಂತಹ ಜಾಣನಡೆಯನ್ನು ಕೋರ್ಟ್ ಗಂಭೀರವಾಗಿ ಗಮನಿಸಿರುವುದು ಸರಿಯಾಗಿಯೇ ಇದೆ.
-ಅಶ್ವತ್ಥ ಕಲ್ಲೇದೇವರಹಳ್ಳಿ, ಕುಂಕಾನಾಡು, ಕಡೂರು
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.