ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ | ಮರೆತುಹೋಯಿತೇ ರಸ್ತೆ ನಿರ್ವಹಣೆ?

ಅಕ್ಷರ ಗಾತ್ರ

ಬೆಂಗಳೂರಿನಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ದಾವಣಗೆರೆ ಕಡೆ ಹೊರಟರೆ ತುಮಕೂರು ನಗರ ದಾಟುವಾಗ ಬೈಪಾಸ್ ರಸ್ತೆಯಲ್ಲಿ ಪ್ರಯಾಣಿಸಬೇಕಿದೆ. ಬಹಳಷ್ಟು ಗುಂಡಿಗಳಿಂದ ಕೂಡಿರುವ ಈ ರಸ್ತೆಯಲ್ಲಿ ಪ್ರಯಾಣಿಸುವುದು ಬಲು ದುಸ್ತರ. ಸಾವಿರಾರು ಕಿ.ಮೀ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡುವ ಪ್ರಾಧಿಕಾರ ಯಾಕೋ ಈ ರಸ್ತೆಯ ನಿರ್ವಹಣೆಯನ್ನು ಮರೆತಂತಿದೆ. ಸುಮಾರು ಹದಿನೈದು ವರ್ಷಗಳಿಂದಲೂ ರಸ್ತೆ ಇದೇ ದುಃಸ್ಥಿತಿಯಲ್ಲಿದೆ.

ನಿತ್ಯವೂ ಈ ರಸ್ತೆಯಲ್ಲಿ ಮುಖ್ಯಮಂತ್ರಿಯಿಂದ ಹಿಡಿದು ಅನೇಕ ಮಂತ್ರಿಗಳು, ಅಧಿಕಾರಿಗಳು ಪ್ರಯಾಣಿಸುತ್ತಿದ್ದರೂ ದುರಸ್ತಿ ಭಾಗ್ಯ ಮಾತ್ರ ದೊರಕಿಲ್ಲ. ಸಾರ್ವಜನಿಕರಿಂದ ಹೆದ್ದಾರಿ ಟೋಲ್ ಶುಲ್ಕವನ್ನು ತಪ್ಪದೇ ವಸೂಲಿ ಮಾಡಲಾಗುತ್ತಿದೆ. ಜನ ಕೂಡಾ ತುಟಿಪಿಟಕ್ ಎನ್ನದೆ ಈ ರಸ್ತೆಯಲ್ಲಿ ನಿತ್ಯ ಶಪಿಸುತ್ತಾ ಪ್ರಯಾಣಿಸುತ್ತಿದ್ದಾರೆ. ಪ್ರಾಧಿಕಾರ ಇನ್ನಾದರೂ ಇದಕ್ಕೆ ಮುಕ್ತಿ ದೊರಕಿಸುವುದೇ?

- ವಿ.ತಿಪ್ಪೇಸ್ವಾಮಿ,ಹಿರಿಯೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT