‘ಎಎವೈ, ಬಿಪಿಎಲ್ ಕಾರ್ಡ್ನಲ್ಲಿ ಹೆಸರಿರುವವರು ಅದನ್ನು ರದ್ದುಪಡಿಸಿಕೊಳ್ಳಬೇಕೆಂಬ ಸರ್ಕಾರದ ಆದೇಶ ಶೇ 95ರಷ್ಟು ನೌಕರರಿಗೆ ಗೊತ್ತಿಲ್ಲ, ಹೀಗಾಗಿ ಈ ಕೆಲಸಕ್ಕಾಗಿ ತಮಗೆ 6 ತಿಂಗಳ ಕಾಲಾವಕಾಶ ನೀಡಿ, ದಂಡ ವಸೂಲಿಯಿಂದ ಮುಕ್ತಗೊಳಿಸಬೇಕು’ ಎಂದು ಕೆಲವು ಸರ್ಕಾರಿ ನೌಕರರು ಆಗ್ರಹಿಸಿರುವುದು (ಪ್ರ.ವಾ., ಫೆ. 15) ಕೇಳಿದವರಲ್ಲಿ ಮುಜುಗರ ಉಂಟುಮಾಡುವಂತಹದ್ದು. ಇದು, ಕಾನೂನಿನಿಂದ ನುಣುಚಿಕೊಳ್ಳುವ ಉದ್ದೇಶಪೂರ್ವಕ ಆಗ್ರಹವೋ ಅಥವಾ ಸರ್ಕಾರದ ಆದೇಶ ತಿಳಿಯದಂತಹ ದಡ್ಡತನವೋ ತಿಳಿಯುತ್ತಿಲ್ಲ.

ಸರ್ಕಾರಿ ಸಂಬಳ ಮತ್ತು ಎಲ್ಲಾ ಭತ್ಯೆಗಳನ್ನು ಪಡೆದು, ಕಡು ಬಡವರಿಗಾಗಿ ಇಟ್ಟ ಯೋಜನೆಗಳ ಫಲವನ್ನು ಲಪಟಾಯಿಸುವ ಸಿಬ್ಬಂದಿ ಸರ್ವೇ ಸಾಮಾನ್ಯವಾಗಿ ಎಲ್ಲ ಇಲಾಖೆಗಳಲ್ಲಿ ಇದ್ದಾರೆ. ಪಡಿತರ ಚೀಟಿಯನ್ನು ಪರಿಶೀಲಿಸದೇ ಕೊಟ್ಟ ಇಲಾಖೆಯವರನ್ನು ಮತ್ತು ಪಡೆದ ನೌಕರರನ್ನು ನಿರ್ದಾಕ್ಷಿಣ್ಯವಾಗಿ ಕಾನೂನಿನ ಚೌಕಟ್ಟಿಗೆ ಒಳಪಡಿಸಬೇಕು. ಇದರಿಂದ, ನಿಜವಾದ ಬಡವರು ಸರ್ಕಾರದ ಯೋಜನೆಗಳ ಫಲ ಅನುಭವಿಸುವಂತೆ ಆಗುತ್ತದೆ

-ರಾ.ಬಾ.ವರದರಾಜನ್,ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.