ಭಾನುವಾರ, ಅಕ್ಟೋಬರ್ 17, 2021
21 °C

ವಿಧಾನಸೌಧ ಇರುವುದು ಚರ್ಚೆ ನಡೆಸಲು ಅಲ್ಲವೇ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೆಹಲಿಯಲ್ಲಿರುವ ಮಾದರಿಯಲ್ಲಿ ಕಾನ್‌ಸ್ಟಿಟ್ಯೂಷನ್‌ ಕ್ಲಬ್ (ಶಾಸಕರು ಮತ್ತು ಮಾಜಿ ಶಾಸಕರ ಮನರಂಜನಾ ಕ್ಲಬ್) ಆರಂಭಿಸಲು ತೀರ್ಮಾನಿಸಿರುವುದಾಗಿ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ. ಬಾಲಬ್ರೂಯಿ ಕಟ್ಟಡದ ಪಾರಂಪರಿಕ, ಐತಿಹಾಸಿಕ ವಿಶೇಷತೆಗೆ ಧಕ್ಕೆ ಬರದಂತೆ ಅಲ್ಲಿ ಅಗತ್ಯ ಸೌಲಭ್ಯ ಕಲ್ಪಿಸಿ ಕ್ಲಬ್‌ ಆರಂಭಿಸಲು ನಿರ್ಧರಿಸಲಾಗಿದೆ. ಶಾಸಕರು ಒಂದೆಡೆ ಸೇರಿ ಚರ್ಚಿಸಲು ಒಂದು ಜಾಗ ಬೇಕು ಎಂಬ ಸಮರ್ಥನೆಯನ್ನು ನೀಡಿದ್ದಾರೆ.

ಹಾಗಾದರೆ, ನಮ್ಮ ಹೆಮ್ಮೆಯ ವಿಧಾನಸೌಧ ಇರುವುದು ಚರ್ಚೆ ನಡೆಸಲು ಅಲ್ಲವೇ? ಈ ಮಾತು ವಿಧಾನಸೌಧಕ್ಕೆ ಅಪಮಾನ ಮಾಡುವಂತಿದೆ. ಅಷ್ಟಕ್ಕೂ ಪಾರಂಪರಿಕ ಕಟ್ಟಡದಲ್ಲಿ ಹಾಗೂ ನಮ್ಮ ತೆರಿಗೆ ಹಣದಲ್ಲಿ ಕ್ಲಬ್ ಏಕೆ? ಹಾಗೆ ಅವರಿಗೆ ಅವಶ್ಯಕತೆ ಇದ್ದಲ್ಲಿ ನಗರದಾದ್ಯಂತ ರೆಸಾರ್ಟುಗಳಿಗೆ ಬರವಿಲ್ಲ. ಅಲ್ಲಿ ಚರ್ಚಿಸಿಕೊಳ್ಳಲಿ. ಇನ್ನು ಕ್ಲಬ್ ಎಂದರೆ ಗುಂಡು, ತುಂಡು, ಇಸ್ಪೀಟು ಮುಂತಾದವುಗಳಿಗೆ ಆದ್ಯತೆಯೇ ಹೊರತು ಜನಪರ ಕಾಳಜಿ ಮತ್ತು ಕರ್ನಾಟಕದ ಅಭಿವೃದ್ಧಿಗಾಗಿ ಚರ್ಚೆ ಮಾಡುತ್ತಾರೆ ಎಂದರೆ ನಂಬಲು ಸಾಧ್ಯವೇ?

-ಪತ್ತಂಗಿ ಎಸ್. ಮುರಳಿ, ಬೆಂಗಳೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.