ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾದರಿ ನಡೆಗೊಂದು ಸಲಾಂ

Last Updated 18 ಏಪ್ರಿಲ್ 2019, 19:50 IST
ಅಕ್ಷರ ಗಾತ್ರ

ಈ ಸಲದ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರ ರಾಷ್ಟ್ರದ ಗಮನ ಸೆಳೆಯಿತು. ಈಗಾಗಲೇ ಈ ಕ್ಷೇತ್ರದಲ್ಲಿ ಮತದಾನ ಮುಗಿದಿರುವುದರಿಂದ, ಈ ರಾಜಕೀಯ ಕುರುಕ್ಷೇತ್ರದ ಬಗ್ಗೆ ಅನಿಸಿಕೆ ವ್ಯಕ್ತಪಡಿಸುವುದು ನನ್ನ ನೈತಿಕ ಕರ್ತವ್ಯ ಎಂದು ಭಾವಿಸಿದ್ದೇನೆ.

ಚುನಾವಣೆ ಪ್ರಚಾರ ಭಾಷಣಗಳು ಅಸಹ್ಯ ಹುಟ್ಟಿಸುವ ಸ್ಥಿತಿ ಮುಟ್ಟಿವೆ. ಈ ಸ್ಥಿತಿ ಇತ್ತೀಚಿನ ಎಲ್ಲಾ ಚುನಾವಣೆಗಳಲ್ಲೂ ಸಾಮಾನ್ಯ ಎಂಬಂತಾಗಿದೆ. ರಾಜಕೀಯ ಮುಖಂಡರು ಬಳಸುವ ಪದ, ಆಂಗಿಕ ಭಾಷೆ, ವೈಯಕ್ತಿಕ ನಿಂದನೆಪ್ರಜ್ಞಾವಂತರಿಗೆ ಇರಿಸುಮುರಿಸು ಉಂಟು ಮಾಡುವಂತಿರುತ್ತವೆ.

ಆದರೆ, ಮಂಡ್ಯ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಸುಮಲತಾ ಅಂಬರೀಷ್‌ ಅವರು ಆದಷ್ಟು ಮಟ್ಟಿಗೆ ತಾಳ್ಮೆಯಿಂದ ಇದ್ದದ್ದು, ಆಂಗಿಕ ಭಾಷೆಯ ಮೇಲೆ ಹಿಡಿತ ಇಟ್ಟುಕೊಂಡಿದ್ದು, ರಾಜಕೀಯ ವಿರೋಧಿಗಳ ಬಗ್ಗೆ ನಿಯಂತ್ರಣ ತಪ್ಪಿ ಮಾತನಾಡದೇ ಇದ್ದದ್ದು, ಸವಾಲಿಗೆ ಸಹಜವಾದ ಸವಾಲನ್ನು ಎಸೆದದ್ದು ಮುಂದಿನ ಚುನಾವಣಾ ಅಭ್ಯರ್ಥಿಗಳಿಗೆ ಮಾದರಿ. ಶಾಸಕ ಸಿ.ಟಿ.ರವಿ ಅವರು ರಾಜಕೀಯ ವಿರೋಧಿಗಳ ಬಗೆಗೆ ಆಡಿದ ಒಂದು ಮಾತಂತೂ ಕೇಳಿಸಿಕೊಳ್ಳಲೂ ಅಸಹ್ಯ ಎಂಬಂತಿತ್ತು. ಈ ದಿಸೆಯಲ್ಲಿ ಸುಮಲತಾ ಅವರಿಗೊಂದು ಸಲಾಂ ಹೇಳಲೇಬೇಕು.
-ಬೀರಣ್ಣ ನಾಯಕ ಮೊಗಟಾ,ಯಲ್ಲಾಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT