ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶುಚಿತ್ವ– ಅಪಾಯ

Last Updated 3 ಸೆಪ್ಟೆಂಬರ್ 2018, 16:53 IST
ಅಕ್ಷರ ಗಾತ್ರ

‘ನೋಟು ಮುಟ್ಟಿದ ತಕ್ಷಣ ಕೈ ತೊಳೆಯದಿದ್ದರೆ ಅಪಾಯ ಗ್ಯಾರಂಟಿ!’ (ಪ್ರ.ವಾ., ಸೆ. 3) ಸುದ್ದಿ ಓದಿದ ಬಳಿಕರೋಗನಿರೋಧಕ ಶಕ್ತಿ ಬಗೆಗಿನ ಒಂದು ಅನುಭವವನ್ನು ಹೇಳಬೇಕೆನಿಸಿತು.

ಒಂದು ಹೊಸ ಬಡಾವಣೆಯಲ್ಲಿ ಮನೆ ಮಾಡಿಕೊಂಡಿದ್ದೆ. ಎಂಜಿನಿಯರ್‌ ಕೊಟ್ಟ ನಕ್ಷೆಯ ಪ್ರಕಾರ ಅಲ್ಲಿ ಕಾಲುವೆಯ ನೀರು ಉತ್ತರಕ್ಕೆ ಹರಿಯಬೇಕಿತ್ತು. ಆದರೆ ಆ ಕಡೆ ಏರುಇದ್ದದ್ದರಿಂದ ನೀರು ಎಂಜಿನಿಯರ್‌ ಮಾತನ್ನು ಕೇಳದೇ ದಕ್ಷಿಣಕ್ಕೇ ಮುಖ ಮಾಡುತ್ತಿತ್ತು. ಹೀಗಾಗಿ ಗಟಾರದ ನೀರೆಲ್ಲವೂ ನಮ್ಮ ಮನೆ ಬಾಗಿಲ ಕಾಲುವೆಯಲ್ಲಿ ನಿಂತಿರುತ್ತಿತ್ತು.

ರಜಾದಿನಗಳಲ್ಲಿ ಆ ನೀರಿನಲ್ಲಿ ಕೆಲವು ಬಡ ಕುಟುಂಬಗಳ ಹುಡುಗರು ಗಂಟೆಗಟ್ಟಲೆ ಮುಳುಗೇಳುತ್ತಿದ್ದರು. ಇಡೀ ಊರಿನ ಗಲೀಜನ್ನೆಲ್ಲ ತುಂಬಿಕೊಂಡಿದ್ದ ಆ ನೀರು, ಹುಡುಗರಿಗೆ ಯಾವ ಹಾನಿಯನ್ನೂ ಮಾಡಿದ್ದು ಕಂಡು ಬರಲಿಲ್ಲ. ಆದರೆ ಎಂದೂ ಆ ನೀರನ್ನು ಮುಟ್ಟದ, ಶುದ್ಧ ನೀರನ್ನೇ ಕುಡಿಯುತ್ತಿದ್ದ ನಾವು ಮಾತ್ರ ಆಗಾಗ ಮಾತ್ರೆಗಳನ್ನು ನುಂಗುತ್ತಿದ್ದುದು ಸುಳ್ಳಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT