ಇನ್ನು ಸಾಕು ನಾಟಕ

ಭಾನುವಾರ, ಜೂಲೈ 21, 2019
27 °C

ಇನ್ನು ಸಾಕು ನಾಟಕ

Published:
Updated:

ಚುನಾಯಿತ ಪ್ರತಿನಿಧಿಯೊಬ್ಬ ವಿನಾ ಕಾರಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದು ಮತದಾರರಿಗೆ ಮಾಡುವ ಅವಮಾನ. ಅವಧಿ ಮುಗಿಯುವುದಕ್ಕೂ ಮುನ್ನ ರಾಜೀನಾಮೆ ನೀಡುವವರನ್ನು ಮುಂದೆ ಚುನಾವಣೆಗೆ ಸ್ಪರ್ಧಿಸಲು ಅನರ್ಹರೆಂದು ಘೋಷಿಸಬೇಕು.

ಜನಪ್ರತಿನಿಧಿಗಳು ಪಕ್ಷಾಂತರ ಮಾಡುವುದು ಲೋಕ ಕಲ್ಯಾಣಕ್ಕಲ್ಲ, ಅಧಿಕಾರದ ಸ್ವಾರ್ಥಕ್ಕಾಗಿ ಎಂಬುದು ಗೊತ್ತಿರುವ ವಿಚಾರ. ಅಂಥವರಿಗೆ ಚುನಾವಣಾ ನಿಷೇಧವೇ ಮದ್ದು. ಆದರೆ ಈ ಕೆಲಸ ಮಾಡುವವರು ಯಾರು? 22 ಜನರ ರಾಜೀನಾಮೆ ಕೊಡಿಸಿ ಉಪಚುನಾವಣೆ ಮಾಡಿಸಿದ ಯುಡಿಯೂರಪ್ಪನವರೇ? ಅಥವಾ ಹೇಗಾದರಾಗಲಿ ‘ಬದುಕಿದ್ದರೆ ಸಾಕು’ ಎನ್ನುವ ಕಾಂಗ್ರೆಸ್ಸಿಗರೇ?

ಕೋಟ್ಯಧೀಶ ಜನಸೇವಕರ ನಾಟಕ ಇನ್ನು ಸಾಕು. ಜನರು ರೊಚ್ಚಿಗೇಳುವ ಮೊದಲು ಜನಪ್ರತಿನಿಧಿ ಕಾಯ್ದೆಗೆ ತಿದ್ದುಪಡಿ ತರಬೇಕು.
-ಅಶೋಕಕುಮಾರ ಅರ್ಕಸಾಲಿ, ತಲಘಟಗಿ

 

ಬರಹ ಇಷ್ಟವಾಯಿತೆ?

 • 7

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !