ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಳವಾರ, ವಾಲೀಕಾರ ಜಾತಿ ಸೂಚಕಗಳಲ್ಲ

Last Updated 8 ಜೂನ್ 2020, 19:21 IST
ಅಕ್ಷರ ಗಾತ್ರ

ತಳವಾರ, ವಾಲೀಕಾರ (ಓಲೇಕಾರ) ಮತ್ತು ಪರಿವಾರ ಪದಗಳು ಜಾತಿ ಸಂಬಂಧದ ಪದಗಳಾಗಿರದೆಗ್ರಾಮಾಧಿಕಾರಿಗಳ ಕೆಳಗಿನ ಸೇವಾವೃತ್ತಿ ಪದಗಳು. ಆಡಳಿತದಲ್ಲಿ ಇವರ ಸೇವೆ ಮಹತ್ವದ್ದಾಗಿತ್ತು.

ಪ್ರಜಾಪ್ರಭುತ್ವ ಪೂರ್ವದ ಆಡಳಿತ ವ್ಯವಸ್ಥೆಯಲ್ಲಿ ಕಾನೂನು ಸುವ್ಯವಸ್ಥೆ, ಭೂಕಂದಾಯ ವಸೂಲಿ ಹಾಗೂ ಜಮೀನು ದಾಖಲೆಗಳನ್ನು ನಿರ್ವಹಿಸಲು ಗ್ರಾಮಗಳಲ್ಲಿ ಪೊಲೀಸ್‍ಗೌಡ, ಮಾಲೀಗೌಡ ಹಾಗೂ ಕುಲಕರ್ಣಿ (ಪಟವಾರಿ)ಹೆಸರಿನ ಅಧಿಕಾರಿಗಳಿಗೆ ವಹಿಸಿಕೊಡಲಾಗುತ್ತಿತ್ತು.

ಇವರ ಕೆಳಗೆತಳವಾರ, ವಾಲೀಕಾರ ಮತ್ತು ಪರಿವಾರದವರು ಸಹಾಯಕರಾಗಿ ಇರುತ್ತಿದ್ದರು. ಇಂದಿನ ಆಡಳಿತ ವ್ಯವಸ್ಥೆಯಲ್ಲಿರುವ ಗ್ರಾಮಲೆಕ್ಕಿಗ, ಗ್ರಾಮಸೇವಕ ಮತ್ತು ಪೊಲೀಸ್‍ ಕಾನ್‌ಸ್ಟೆಬಲ್‌ಗಳಂತೆ ಇವರು ಕಾರ್ಯನಿರ್ವಹಿಸುತ್ತಿದ್ದರು. ತಳವಾರರು ರಾತ್ರಿ ಊರನ್ನು ಗಸ್ತು ತಿರುಗಿ ದರೋಡೆ, ಕಳ್ಳತನವಾಗದಂತೆ ನೋಡಿಕೊಳ್ಳುತ್ತಿದ್ದರು. ವಾಲೀಕಾರರು ಕಂದಾಯ ವಸೂಲಿ ಹಾಗೂ ಗ್ರಾಮಾಧಿಕಾರಿಗಳ ಓಲೆಗಳನ್ನು ಸರ್ಕಾರಕ್ಕೆ ತಲುಪಿಸುತ್ತಿದ್ದರು.

ಇಂದು ಗೌಡಿಕೆ, ಕುಲಕರ್ಣಿಕೆ, ತಳವಾರ, ಪರಿವಾರ ಮತ್ತು ವಾಲೀಕಾರಿಕೆಗಳು ಹೋಗಿದ್ದರೂ ಅವುಗಳನ್ನು ನಿರ್ವಹಿಸುತ್ತಿದ್ದ ಮನೆತನಗಳು ಅವರ ಉಪನಾಮಗಳಾಗಿ ಉಳಿದುಕೊಂಡು ಬಂದಿವೆ. ಆದರೆ ಈ ಉಪನಾಮಗಳು ಜಾತಿ ಸೂಚಕಗಳಲ್ಲ.

-ಪ್ರೊ. ಶಾಶ್ವತಸ್ವಾಮಿ ಮುಕ್ಕುಂದಿಮಠ,ಸಿಂಧನೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT