ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳಪೆ ಪಿಪಿಇ ಕಿಟ್‌: ಕಠಿಣ ಶಿಕ್ಷೆಯಾಗಲಿ

Last Updated 16 ಜೂನ್ 2020, 19:30 IST
ಅಕ್ಷರ ಗಾತ್ರ

ವಿಕ್ಟೋರಿಯಾ ಆಸ್ಪತ್ರೆಯ ವೈದ್ಯ ಸಿಬ್ಬಂದಿಗೆ ಕಳಪೆ ದರ್ಜೆಯ ಪಿಪಿಇ ಕಿಟ್ ಒದಗಿಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದು (ಪ್ರ.ವಾ., ಜೂನ್‌ 15), ಅವರು ಜೀವಭಯದಿಂದಲೇ ರೋಗಿಗಳ ಸೇವೆ ಮಾಡುವಂತಾಗಿರುವುದು ಅತ್ಯಂತ ಕಳವಳಕಾರಿ ಸಂಗತಿ. ಕುಟುಂಬ ಸದಸ್ಯರಿಂದ ದೂರವಿದ್ದು, ತಮ್ಮ ಆರೋಗ್ಯವನ್ನೇ ಪಣಕ್ಕಿಟ್ಟು ದುಡಿಯುವವರನ್ನು ‘ಕೊರೊನಾ ಯೋಧರು’ ಎಂದು ಕರೆದು ಪುಷ್ಟವೃಷ್ಟಿಯಿಂದ ಗೌರವಿಸುತ್ತೇವೆ. ಇದರ ಜೊತೆಗೆ, ಅವರು ಆತಂಕವಿಲ್ಲದೆ ಕೆಲಸ ಮಾಡುವಂತಹ ಪೂರಕ ವಾತಾವರಣವನ್ನು ಸೃಷ್ಟಿಸಿ, ಅವರ ಆರೋಗ್ಯ ರಕ್ಷಣೆಗೆ ಉತ್ತಮ ಗುಣಮಟ್ಟದ ಪಿಪಿಇ ಕಿಟ್‌ಗಳನ್ನು ಒದಗಿಸುವುದು ಅತ್ಯವಶ್ಯಕವಾಗಿ ಆಗಬೇಕಾಗಿರುವ ಕೆಲಸ.

ಇಂತಹ ಕಳಪೆ ಸಾಮಗ್ರಿಗಳು ಬೇರೆ ಆಸ್ಪತ್ರೆಗಳಿಗೂ ಪೂರೈಕೆಯಾಗಿರುವ ಸಾಧ್ಯತೆಯಿದ್ದು, ಅವು ಗಳನ್ನು ಕೂಡಲೇ ಬದಲಿಸಬೇಕು. ಕಾರಣಕರ್ತ ರನ್ನು ಗುರುತಿಸಿ, ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸುವ ಕೆಲಸ ಆಗಬೇಕು. ಕೊರೊನಾ ಬಂದಿರುವುದು, ಬೆಂದ ಮನೆಯಲ್ಲಿ ಗಳ ಇರಿಯುವ ಮನಃಸ್ಥಿತಿಯವರು ಹಾಗೂ ಅಕ್ರಮವಾಗಿ ಹಣ ಗಳಿಸಲು ಸದಾ ಹವಣಿಸುವವರಿಗೆ ವರದಾನವಾಗಿ ಪರಿಣಮಿಸುವಂತೆ ಆಗಬಾರದು.

ಪುಟ್ಟೇಗೌಡ,ಬೆಂಗಳೂರು‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT