ಮಂಗಳವಾರ, ಅಕ್ಟೋಬರ್ 27, 2020
28 °C

ಸುಕುಮಾರರಿಗೂ ಇರಲಿ ಯೋಜನೆ

ವಾಚಕರ ವಾಣಿ Updated:

ಅಕ್ಷರ ಗಾತ್ರ : | |

ಅಂಚೆ ಇಲಾಖೆಯಿಂದ ಹೆಣ್ಣುಮಕ್ಕಳಿಗಾಗಿ ಸುಕನ್ಯಾ ಯೋಜನೆ ಜಾರಿಗೆ ತರಲಾಗಿದೆ. ಈ ಯೋಜನೆಯಡಿ ಪೋಷಕರು ತಮ್ಮ ಹಣಕಾಸು ಸಾಮರ್ಥ್ಯಕ್ಕೆ ಅನುಗುಣವಾಗಿ ಹೆಣ್ಣುಮಕ್ಕಳ ಹೆಸರಿನಲ್ಲಿ ಹಣವನ್ನು ಹೂಡಬಹುದು. ಹೀಗೆ ಕೂಡಿಡುವ ಈ ಹಣದಿಂದ ಹೆಣ್ಣುಮಕ್ಕಳ ವಿದ್ಯಾಭ್ಯಾಸ, ಮದುವೆಯಂತಹ ಭವಿಷ್ಯದ ಕಾರ್ಯಗಳಿಗೆ ಅನುಕೂಲವಾಗುತ್ತದೆ. ಆದರೆ ಈ ಯೋಜನೆಯನ್ನು ಗಂಡುಮಕ್ಕಳಿಗೂ ವಿಸ್ತರಿಸುವುದು ಒಳ್ಳೆಯದು. ಇದರಲ್ಲಿ ಹೆಣ್ಣು– ಗಂಡು ಎಂಬ ಭೇದ ಯಾಕೆ?

ಇಂದು ಗಂಡು ಮತ್ತು ಹೆಣ್ಣು ಮಕ್ಕಳಿಬ್ಬರೂ ವಿದ್ಯಾಭ್ಯಾಸಕ್ಕಾಗಿ ವಿದೇಶಗಳಿಗೆ ಹೋಗುತ್ತಾರೆ. ಈ ಸಮಯದಲ್ಲಿ ಸುಕುಮಾರ ಯೋಜನೆಯಡಿ ಹಣ ಹೂಡಿಕೆ ಮಾಡಿದರೆ ಮುಂದೆ ಪೋಷಕರಿಗೆ ಅನುಕೂಲವಾಗುತ್ತದೆ.

- ಎಂ.ಎಸ್.ಉಷಾ ಪ್ರಕಾಶ್, ಮೈಸೂರು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.