ಬುಧವಾರ, ಅಕ್ಟೋಬರ್ 20, 2021
25 °C

ಸೊಲ್ಲಡಗಿರುವುದಕ್ಕೆ ಬೇರೆ ಕಾರಣವಿದೆ!

ವಾಚಕರ ವಾಣಿ Updated:

ಅಕ್ಷರ ಗಾತ್ರ : | |

‘ಬೆಲೆಯೇರಿಕೆ: ಸೊಲ್ಲೆತ್ತದವರ ಕೊಡುಗೆ!’ ಲೇಖನದಲ್ಲಿ (ಸಂಗತ, ಅ. 12) ಡಾ. ಎಂ.ವೆಂಕಟಸ್ವಾಮಿ ಅವರು ‘ಸಂಕಷ್ಟ ಅನುಭವಿಸುತ್ತಿರುವ ಜನರೇಕೆ ಇದರ ವಿರುದ್ಧ ದನಿ ಎತ್ತುತ್ತಿಲ್ಲ’ ಎಂದು ಪ್ರಶ್ನಿಸಿದ್ದಾರೆ. ಹಾಗೇನೂ ಇಲ್ಲ. ಸೆಪ್ಟೆಂಬರ್‌ 27ರಂದು ನಡೆದ ‘ಭಾರತ್ ಬಂದ್‌’ನಲ್ಲಿ ಇಡೀ ದೇಶವೇ ಈ ಬೆಲೆ ಏರಿಕೆ ವಿರುದ್ಧ ಪ್ರತಿಭಟಿಸಿದೆ. ಆದರೆ ಸರ್ಕಾರ ಮಾತ್ರ ಅಂಥ ಪ್ರತಿಭಟನೆಗೆ ಸ್ಪಂದಿಸದೆ ಇಂಧನ ಬೆಲೆ ಏರಿಸುತ್ತಲೇ ಇದೆ. ಅದಕ್ಕೆ ಕಾರಣವೂ ಸ್ಪಷ್ಟವಾಗಿದೆ. ಅದೇನೆಂದರೆ ಆಡಳಿತ ಪಕ್ಷಕ್ಕೆ ಸ್ಪಷ್ಟ ಬೆಂಬಲವಿರುವುದು ಒಂದಾದರೆ, ಮತ್ತೊಂದು ಕಾರಣ ಬಲಿಷ್ಠವಾದ ವಿರೋಧ ಪಕ್ಷ ಇಲ್ಲದಿರುವುದಾಗಿದೆ.

ಈ ನಡುವೆ ಬೆಲೆ ಏರಿಕೆಯ ನೇರ ಪರಿಣಾಮ ಅನುಭವಿಸುತ್ತಿರುವ ರೈತ ಕೂಲಿಕಾರರು ನಿಜಕ್ಕೂ ದನಿ ಎತ್ತಲಾರದಷ್ಟು ನಿಶ್ಶಕ್ತರಾಗಿದ್ದಾರೆ! ಇಂತಹ ಪರಿಸ್ಥಿತಿಯಿಂದಾಗಿ ಬೆಲೆ ಏರಿಕೆ ನಿತ್ಯವಾಗಿದೆ. ಆದರೆ ಮತ ದಾರರು ಮಾತ್ರ ಚುನಾವಣೆ ಬಂದಾಗ ಬೆಲೆ ಏರಿಕೆಗೆ ಕಾರಣವಾದ ಪಕ್ಷಕ್ಕೆ ಪಾಠ ಕಲಿಸುತ್ತಾರೆಂಬ ವಿಶ್ವಾಸವೂ ಹೋರಾಟಗಾರರಿಗಿದೆ. ಸರಿ ತಾನೆ?

- ಹುರುಕಡ್ಲಿ ಶಿವಕುಮಾರ, ಬಾಚಿಗೊಂಡನಹಳ್ಳಿ, ಹಗರಿಬೊಮ್ಮನಹಳ್ಳಿ ತಾಲ್ಲೂಕು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.