ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ | ಗೋಮಾಳ: ಉಂಡಷ್ಟೂ ಲಾಭ ಉಳ್ಳವರಿಗೆ

Last Updated 28 ಜುಲೈ 2020, 19:30 IST
ಅಕ್ಷರ ಗಾತ್ರ

ಯಲಹಂಕ, ಬೆಂಗಳೂರು ಪೂರ್ವ ಹಾಗೂ ಬೆಂಗಳೂರು ಉತ್ತರ ತಾಲ್ಲೂಕುಗಳಲ್ಲಿನ ಕೋಟ್ಯಂತರ ರೂಪಾಯಿ ಬೆಲೆಬಾಳುವ 37 ಎಕರೆ ಸರ್ಕಾರಿ ಗೋಮಾಳವನ್ನು ಖಾಸಗಿ ವ್ಯಕ್ತಿಗಳಿಗೆ ಅಕ್ರಮವಾಗಿ ಖಾತೆ ಮಾಡಿಕೊಡಲು ಮುಂದಾಗಿರುವುದು ವರದಿಯಾಗಿದೆ (ಪ್ರ.ವಾ., ಜುಲೈ 26). ಇದು ಕೇವಲ ಬೆಂಗಳೂರಿಗೆ ಸೀಮಿತವಾಗಿಲ್ಲ. ರಾಜ್ಯದ ಹಲವು ಗ್ರಾಮಗಳಲ್ಲಿ ಸರ್ಕಾರಿ ಗೋಮಾಳವು ಉಳ್ಳವರ ಕೈಯಲ್ಲಿದೆ. ಗೋಮಾಳದ ಪಕ್ಕದಲ್ಲಿ ಇರುವ ಜಮೀನುದಾರರು ಗೋಮಾಳವನ್ನು ನಿರಂತರವಾಗಿ ಒತ್ತುವರಿ ಮಾಡಿಕೊಳ್ಳುತ್ತಾ ಬಂದಿದ್ದರೂ ಕಂದಾಯ ಇಲಾಖೆ ಅಧಿಕಾರಿಗಳು ಹಳ್ಳಿಗಳ ಕಡೆ ಸುಳಿಯುತ್ತಿಲ್ಲ. ಗೋಮಾಳ, ಗೋಕಟ್ಟೆಗಳನ್ನು ರಕ್ಷಣೆ ಮಾಡಬೇಕಾದುದು ಕಂದಾಯ ಇಲಾಖೆಯ ಕರ್ತವ್ಯ. ಆದರೆ ಯಾರಾದರೂ ಇಲಾಖೆಗೆ ದೂರು ಕೊಟ್ಟಾಗ ಮಾತ್ರ ಗೋಮಾಳ ಒತ್ತುವರಿಯಂಥ ಪ್ರಕರಣಗಳು ಬೆಳಕಿಗೆ ಬರುತ್ತವೆ. ಇಲ್ಲವಾದರೆ, ಸಿಕ್ಕಷ್ಟು ವರ್ಷ ಫಸಲು ಬೆಳೆದುಕೊಂಡು, ಉಂಡಷ್ಟೂ ಲಾಭ ಎನ್ನುವಂತೆ ಗೋಮಾಳಗಳ ದುರ್ಬಳಕೆ ಮುಂದುವರಿಯುತ್ತಲೇ ಇರುತ್ತದೆ.

ಇಂತಹವರ ವಿರುದ್ಧ ಕ್ರಮ ಜರುಗಿಸಬೇಕು. ಪ್ರತೀ ಊರಿನಲ್ಲಿ ಇರುವ ಗೋಮಾಳ, ಗೋಕಟ್ಟೆಗಳನ್ನು ಸರ್ವೆ ಮಾಡಿಸಿ, ಕಲ್ಲು ನೆಡಿಸಿ ಜನ, ಜಾನುವಾರುಗಳ ಉಪಯೋಗಕ್ಕೆ ಬಳಸಬೇಕು. ಬ್ರಿಟಿಷ್ ಆಡಳಿತದ ಕಾಲದಿಂದಲೂ ಉಳಿಸಿಕೊಂಡು ಬಂದಿರುವ ಬಹೂಪಯೋಗಿ ಗೋಮಾಳಗಳನ್ನು ರಕ್ಷಿಸುವ ಹೊಣೆಯನ್ನು ತಾಲ್ಲೂಕು ದಂಡಾಧಿಕಾರಿಗಳು ವಹಿಸಿಕೊಳ್ಳಬೇಕು. ಒತ್ತುವರಿ ಮಾಡುವ ಪ್ರಭಾವಿಗಳಿಗೆ ಕುಮ್ಮಕ್ಕು ನೀಡುವ ಭ್ರಷ್ಟ ಅಧಿಕಾರಿಗಳಿಗೆ ಶಿಕ್ಷೆಯಾಗಬೇಕು.

ಡಾ. ಶಿವರಾಜ್ ಬ್ಯಾಡರಹಳ್ಳಿ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT