ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ | ಡಬಲ್ ಎಂಜಿನ್ ಸರ್ಕಾರ ಎಂಬ ಮಿಥ್ಯೆ

Last Updated 13 ನವೆಂಬರ್ 2022, 19:28 IST
ಅಕ್ಷರ ಗಾತ್ರ

ಉನ್ನತ ಸ್ಥಾನಗಳನ್ನು ಅಲಂಕರಿಸಿರುವ ಅನೇಕರು ಹಾಗೂ ಬಿಜೆಪಿಯ ಹಲವು ನಾಯಕರು, ಡಬಲ್ ಎಂಜಿನ್ ಸರ್ಕಾರ ಎಂದು ಆಗಿಂದಾಗ್ಗೆ ಹೇಳುತ್ತಿರುವುದು ಅಷ್ಟೇನೂ ಸರಿಕಾಣದು. ಇದೊಂದು ರೀತಿಯಲ್ಲಿ ಹಾಸ್ಯಾಸ್ಪದ ಎನಿಸುತ್ತದೆ. ಈ ಮಹಾಶಯರ ಪ್ರಕಾರ, ರಾಜ್ಯ ಮತ್ತು ಕೇಂದ್ರದಲ್ಲಿ ಒಂದೇ ಪಕ್ಷದ ನೇತೃತ್ವದ ಸರ್ಕಾರ ಇದ್ದರೆ ಅದನ್ನು ಡಬಲ್ ಎಂಜಿನ್ ಸರ್ಕಾರ ಎಂದು ಕರೆಯಲಾಗುತ್ತದೆ. ಈ ಗುಣ ವಿಶೇಷಣವನ್ನು ಉತ್ತರಪ್ರದೇಶ ಮತ್ತು ಕರ್ನಾಟಕದ ಬಗ್ಗೆ ಪದೇ ಪದೇ ಒತ್ತಿ ಹೇಳಲಾಗುತ್ತಿದೆ. ಕರ್ನಾಟಕದಲ್ಲಿ ಮುಂದಿನ ವರ್ಷ ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಹೀಗಾಗಿ ಮತದಾರರನ್ನು ಓಲೈಸಲು ಕೆಲವು ನಾಯಕರು ಅನಗತ್ಯವಾದರೂ ಪದೇ ಪದೇ ಈ ಪುಂಗಿಯನ್ನು ಊದುತ್ತಿರುವುದು ಅಸಹ್ಯಕರವಾಗಿದೆ.

ಒಕ್ಕೂಟ ರಾಷ್ಟ್ರವಾದ ಭಾರತದಲ್ಲಿ ವಿವಿಧ ಜಾತಿ ಮತ್ತು ಪಂಗಡಗಳಿಗೆ ಸೇರಿರುವ ಕೋಟ್ಯಂತರ ಜನರಿದ್ದಾರೆ. ಕೇಂದ್ರ ಮತ್ತು ರಾಜ್ಯಗಳಲ್ಲಿ ಒಂದೇ ಪಕ್ಷದ ನೇತೃತ್ವದ ಸರ್ಕಾರ ಇರಬೇಕು ಎಂದು ನಮ್ಮ ರಾಜ್ಯಾಂಗದಲ್ಲಿ ಎಲ್ಲಿಯೂ ಹೇಳಿಲ್ಲ. ದೇಶದ ವಿವಿಧ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ಅಧಿಕಾರದಲ್ಲಿವೆ. ತಮಗೆ ಇಷ್ಟ ಬಂದ ಪಕ್ಷವನ್ನು ಅಧಿಕಾರಕ್ಕೆ ತರುವುದು ಆಯಾ ರಾಜ್ಯದ ಮತದಾರ ಪ್ರಭುಗಳ ತೀರ್ಮಾನ. ಅದುಬಿಟ್ಟು ಡಬಲ್ ಎಂಜಿನ್ ಸರ್ಕಾರ ಇದ್ದರೆ ಮಾತ್ರ ಅಭಿವೃದ್ಧಿ ಸಾಧ್ಯ ಎಂಬುದು ಪ್ರಜಾಪ್ರಭುತ್ವ‌ ವಿರೋಧಿ ಧೋರಣೆ. ಒಂದು‌ ವೇಳೆ ನೀವು ಬೇರೆ ಪಕ್ಷಕ್ಕೆ ಮತ ನೀಡಿದರೆ, ನಿಮ್ಮ ರಾಜ್ಯದ ಅಭಿವೃದ್ಧಿಗೆ ಕೇಂದ್ರ ಸರ್ಕಾರದ ನೆರವು ಸಿಗುವುದಿಲ್ಲ ಎಂಬ ಪರೋಕ್ಷ ಸೂಚನೆಯನ್ನು ಸಹ ಡಬಲ್ ಎಂಜಿನ್ ಸರ್ಕಾರದ ಪ್ರವರ್ತಕರು ನೀಡುತ್ತಿದ್ದಾರೆ. ಆದ್ದರಿಂದ ನಾಯಕರು ಇನ್ನು ಮುಂದಾದರೂ ಡಬಲ್ ಎಂಜಿನ್ ಸರ್ಕಾರ ಎಂಬ ಅನರ್ಥಕ ಪದವನ್ನು ಬಳಸದಿರುವುದು ಒಳ್ಳೆಯದು.
–ಕೆ.ವಿ.ವಾಸು,ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT