ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಪಾಸ್‌ಪೋರ್ಟ್‌ ಕೇಂದ್ರ ವ್ಯಾಪಾರದ ಸ್ಥಳವೇ?

ಅಕ್ಷರ ಗಾತ್ರ

ನನ್ನ ಮತ್ತು ನನ್ನ ಮಗಳ ಪಾಸ್‌ಪೋರ್ಟ್‌ ಅವಧಿ ಮುಗಿದಿತ್ತು. ಅವನ್ನು ನವೀಕರಿಸಲು ಇತ್ತೀಚೆಗೆ ಮಧ್ಯಾಹ್ನ ನಿಗದಿಯಂತೆ ಬೆಂಗಳೂರಿನ ಲಾಲ್‌ಬಾಗ್‌ ಹತ್ತಿರದ ಪಾಸ್‌ಪೋರ್ಟ್‌ ಕಚೇರಿಗೆ ಹೋದೆವು. ಮೊದಲ ಕೌಂಟರಿಗೆ ಹೋಗಿ ಕುಳಿತು ಪ್ರಕ್ರಿಯೆ ಮುಗಿಯುವ ಹೊತ್ತಿಗೆ ‘ನಿಮಗೆ ಪಾಸ್‌ಪೋರ್ಟ್‌ ಕವರ್ ಬೇಕಾ?’ ಎಂದು ಕೇಳಿದರು. ಅವರೇ ಕೆಲವು ಚಿತ್ರಗಳನ್ನು ತೋರಿಸಿ, ‘ಯಾವುದು ಬೇಕು?’ ಎಂದು ಕೇಳಿ, ಇವಕ್ಕೆ ಇಂತಿಷ್ಟು ಎಂದು ಹೇಳಿದರು. ‘ಒಳ್ಳೆಯ ಕವರಿಗೆ 500 ರೂಪಾಯಿ’ ಎಂದರು. ಸರಿ ಎಂದು ಒಪ್ಪಿದೆವು. ನಂತರ ‘ನಿಮಗೆ ಪಾಸ್‌ಪೋರ್ಟ್‌ ಯಾವಾಗ ಬರುತ್ತದೆ’ ಎಂದು ಇ– ಮೇಲ್‍ನಲ್ಲಿ ಸಂದೇಶ ಬರಬೇಕಾದರೆ 50 ರೂಪಾಯಿ ಎಂದರು. ಅನಿವಾರ್ಯವಾಗಿ ಒಪ್ಪಿದೆವು. ಎರಡು ದಿನ ಆದ ಮೇಲೆ ಪಾಸ್‌ಪೋರ್ಟ್‌ ಬಂತು. ನಾಲ್ಕು ದಿನ ಆದ ಮೇಲೆ ಕವರ್‌ಗಳು ಬಂದವು.

ಕಚೇರಿಯಲ್ಲೇ ಇರುವ ಜೆರಾಕ್ಸ್ ಮಾಡಿಕೊಡುವ ಹುಡುಗಿಯು ಚಿಲ್ಲರೆ ಕೊಡದೆ ‘ಆಮೇಲೆ ಪಡೆದುಕೊಳ್ಳಿ’ ಎಂದು ಕಳಿಸುತ್ತಿದ್ದುದನ್ನು, ಕೆಲವರು ಚಿಲ್ಲರೆ ಕೊಡಿ ಎಂದು ಜಗಳವಾಡುತ್ತಿದ್ದುದನ್ನು ಕಂಡೆ. ಎಂಥ ವ್ಯಾಪಾರದ ತಾಣವಾಗಿದೆ ಪಾಸ್‌ಪೋರ್ಟ್‌ ಕೇಂದ್ರ ಎನಿಸಿತು. ಸಾವಿರಾರು ಜನ ಬರುವ ಆ ಕೇಂದ್ರದಲ್ಲಿ ಈ ರೀತಿ ದುಡ್ಡು ಪೀಕುವ ಕೆಲಸ ಎಗ್ಗಿಲ್ಲದೇ ನಡೆಯುತ್ತಿದೆ. ಬರುವ ಗ್ರಾಹಕರಿಗೆ ಚಿಲ್ಲರೆ ದುಡ್ಡು ಲೆಕ್ಕಕ್ಕೆ ಸಿಗುವುದಿಲ್ಲ. ನೂರೋ ಐವತ್ತೋ ನೋಟು ಕೊಟ್ಟವರು ನೆನಪು ಬಂದರೆ ಕೇಳುತ್ತಿದ್ದರು. ಕೆಲವರಿಗೆ ಸದ್ಯ ಕೆಲಸ ಆದರೆ ಸಾಕು ಎಂಬ ಮನಃ ಸ್ಥಿತಿ ಇರುತ್ತದೆ. ಗ್ರಾಹಕರ ಇಂತಹ ಮನಃಸ್ಥಿತಿಯನ್ನು ಚೆನ್ನಾಗಿ ಬಲ್ಲ ಅಲ್ಲಿನವರು ಅವ್ಯಾಹತವಾಗಿ ವ್ಯಾಪಾರದಲ್ಲಿ ತೊಡಗಿ ದ್ದಾರೆ. ಸಂಬಂಧಪಟ್ಟವರು ಇತ್ತ ಗಮನಹರಿಸಿ ಸರಿಪಡಿಸುವ ಪ್ರಯತ್ನ ನಡೆಸಲಿ.

-ಮಲ್ಲತ್ತಹಳ್ಳಿ ಡಾ. ಎಚ್.ತುಕಾರಾಂ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT