ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಮೆಲ್ ಬದಲು ಚೀನಾ ಬೋಗಿ

Last Updated 24 ಫೆಬ್ರುವರಿ 2020, 19:45 IST
ಅಕ್ಷರ ಗಾತ್ರ

ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ನಿರ್ಮಾಣವಾಗುತ್ತಿರುವ ‘ನಮ್ಮ ಮೆಟ್ರೊ’ಗೆ ಬೇಕಾದ 216 ಬೋಗಿಗಳನ್ನು ಪೂರೈಸುವ ಗುತ್ತಿಗೆಯನ್ನು ಬೆಮೆಲ್‌ ಬದಲು, ಕಡಿಮೆ ಮೊತ್ತ ನಮೂದಿಸಿರುವ ಕಾರಣಕ್ಕೆ ಚೀನಾ ದೇಶದ ಸಂಸ್ಥೆಯೊಂದಕ್ಕೆ ಗುತ್ತಿಗೆ ನೀಡುತ್ತಿರುವುದು ದುರದೃಷ್ಟಕರ. ಬೆಮೆಲ್ ಸಹ ಕೇಂದ್ರ ಸರ್ಕಾರದ ಅಧೀನದ ಸಂಸ್ಥೆಯೇ ಆಗಿರುವುದರಿಂದ ಲಾಭ–ನಷ್ಟಗಳು ಇಲ್ಲಿ ಮುಖ್ಯವಾಗಬಾರದು. ಚೀನಾ ಸಂಸ್ಥೆಯು ಆಂಧ್ರಪ್ರದೇಶದ ಶ್ರೀಸಿಟಿಯಲ್ಲಿ ನಿರ್ಮಾಣ ಘಟಕ ಸ್ಥಾಪಿಸಿ, ಬೋಗಿ ಪೂರೈಸಲು ಸಾಧ್ಯವಿರುವಾಗ, ಈಗಾಗಲೇ ಬೋಗಿಗಳನ್ನು ಪೂರೈಸಿರುವ ಬೆಮೆಲ್ ಘಟಕವನ್ನು ವಿಸ್ತರಿಸಿ ಅದರಿಂದಲೇ ಖರೀದಿಸಲು ಯಾಕಾಗುವುದಿಲ್ಲ? ಇದರಿಂದ ಉದ್ಯೋಗ ಸೃಷ್ಟಿಯಾಗುತ್ತದೆ. ಬೆಮೆಲ್ ಸಹ ಆರ್ಥಿಕವಾಗಿ ಬಲಿಷ್ಠವಾಗುತ್ತದೆ. ಇಲ್ಲವಾದಲ್ಲಿ ಏರ್ ಇಂಡಿಯಾದಂತಹ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಿಗೆ ಒದಗಿದ ಸ್ಥಿತಿ ಮುಂದೊಂದು ದಿನ ಬೆಮೆಲ್‌ನಂತಹ ದೈತ್ಯಸಂಸ್ಥೆಗೂ ಒದಗಬಹುದು.

-ಚಂದ್ರಶೇಖರ ಪುಟ್ಟಪ್ಪ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT