ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮೌಲಿಕ’ ಶಿಕ್ಷಣ ಬೇಕು

ಅಕ್ಷರ ಗಾತ್ರ

‘ಮಕ್ಕಳಲ್ಲಿ ಮಾನವೀಯ ಮೌಲ್ಯಗಳು ಕಡಿಮೆಯಾಗುತ್ತಿವೆ’ ಎಂದು ಸಚಿವರೊಬ್ಬರು ಈಚೆಗೆ ಕಳವಳ ವ್ಯಕ್ತಪಡಿಸಿದ್ದು ವರದಿಯಾಗಿದೆ. ಇದು ಖಂಡಿತವಾಗಿಯೂ ಸತ್ಯ ಸಂಗತಿ. ಮೌಲ್ಯಗಳು ಕಡಿಮೆಯಾಗುವುದಕ್ಕೆ ಕಾರಣ ಏನು ಎಂಬುದನ್ನು ಸ್ವಲ್ಪ ಆಳವಾಗಿ ಯೋಚಿಸಬೇಕಾಗಿದೆ.

ಶಿಕ್ಷಣವು ಈಗ ‘ಕಲಿಕೆ’ಯಾಗಿ ಉಳಿದಿಲ್ಲ, ಇಡೀ ಶಾಲಾ ವ್ಯವಸ್ಥೆ ‘ಸಂಖ್ಯೆಗಳ ಆಟ’ವಾಗಿದೆ (ನಂಬರ್ ಗೇಮ್). ಸಮಾಜ, ಶಾಲೆಗಳು ಹಾಗೂ ಪೋಷಕರು ಎಲ್ಲಿಯವರೆಗೆ ಅಂಕಗಳ ಆಧಾರದಲ್ಲೇ ವಿದ್ಯಾರ್ಥಿಗಳ ಭವಿಷ್ಯ ಹಾಗೂ ಅವರ ಬುದ್ಧಿಮಟ್ಟವನ್ನು ಅಳೆಯುತ್ತಾರೋ ಅಲ್ಲಿಯವರೆಗೂ ಅವರಲ್ಲಿ ಮೌಲ್ಯವನ್ನು ತುಂಬುವುದು ಕಷ್ಟ.

ಅಂಕಗಳ ಆಧಾರದಲ್ಲೇ ಶ್ರೇಣಿಯನ್ನು ನಿರ್ಧರಿಸಿ, ಮಕ್ಕಳನ್ನು ಆದರಿಸಿ ಸತ್ಕಾರ ಮಾಡುವ ವ್ಯವಸ್ಥೆ ಇರುವವರೆಗೂ (ಸಚಿವರು ಮೇಲಿನ ಹೇಳಿಕೆಯನ್ನು ನೀಡಿರುವುದು ಇಂಥ ಒಂದು ಸಮಾರಂಭದಲ್ಲಿ ಎನ್ನುವುದು ವಿಪರ್ಯಾಸ) ಮಕ್ಕಳಲ್ಲಿ ಮೌಲ್ಯವನ್ನು ಹುಡುಕಲಾಗುವುದಿಲ್ಲ. ಪಡೆದ ಅಂಕಗಳ ಜೊತೆಗೆ ಮಕ್ಕಳು ರೂಢಿಸಿಕೊಂಡಿರುವ ಮೌಲ್ಯಗಳನ್ನೂ ಪರಿಗಣಿಸಿ ಮೌಲ್ಯಮಾಪನ ಮಾಡಿದಾಗ ಮಾತ್ರ ಶೈಕ್ಷಣಿಕ ಗುಣಮಟ್ಟ ಹೆಚ್ಚುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT