ಏಕೆ ಈ ಬದಲಾವಣೆ?

7

ಏಕೆ ಈ ಬದಲಾವಣೆ?

Published:
Updated:

‘ದೇವರ ದಯೆಯಿಂದಲೇ ಮುಖ್ಯಮಂತ್ರಿಯಾಗಿರುವ ನಾನು ದೇವಸ್ಥಾನ ಸುತ್ತಿದರೆ ತಪ್ಪೇನು? ನನ್ನ ದೇವಾಲಯ ಯಾತ್ರೆಯಿಂದ ಆಡಳಿತದ ಕೆಲಸಗಳಿಗೆ ತೊಂದರೆಯೇನೂ ಆಗಿಲ್ಲ’ ಎಂದಿದ್ದಾರೆ ಮುಖ್ಯಮಂತ್ರಿ (ಪ್ರ.ವಾ., ಆ. 30). ದೇವರ ನಂಬಿಕೆ ನಮಗೆ ವೈಯಕ್ತಿಕವಾದುದು; ಕುಮಾರಸ್ವಾಮಿಯವರ ನಂಬಿಕೆ ಹಾಗಿರಲಿ. ಆದರೆ ಅವರು ಮುಖ್ಯಮಂತ್ರಿಯಾಗಿ ಅತ್ಯಂತ ದೊಡ್ಡ ಹೊಣೆ ಹೊತ್ತಿದ್ದಾರೆ. ಆದ್ದರಿಂದ ಅವರ ಅಮೂಲ್ಯ ಸಮಯ ಹೀಗೆ ಗುಡಿ ಗುಂಡಾರ ಸುತ್ತುವುದರಿಂದ ಪೋಲಾಗುವುದಿಲ್ಲವೇ?

ಅಂದಹಾಗೆ ಕುಮಾರಸ್ವಾಮಿ ಮುಖ್ಯಮಂತ್ರಿಯಾದ ಹೊಸತರಲ್ಲಿ ‘ನಾನು ರಾಹುಲ್ ಗಾಂಧಿ ಕೃಪೆಯಿಂದ ಮುಖ್ಯಮಂತ್ರಿಯಾಗಿದ್ದೇನೆ. ಮತದಾರರೇ ನನಗೆ ಪ್ರಭುಗಳು’ ಎಂದಿದ್ದರಲ್ಲ! ಈಗೇಕೆ ಈ ಬದಲಾವಣೆ?

–ಹುರುಕಡ್ಲಿ ಶಿವಕುಮಾರ, ಬಾಚಿಗೊಂಡನಹಳ್ಳಿ

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !