ಪೂರ್ವಸಿದ್ಧತಾ ಪರೀಕ್ಷೆಗಳ ಹೊರೆ

7

ಪೂರ್ವಸಿದ್ಧತಾ ಪರೀಕ್ಷೆಗಳ ಹೊರೆ

Published:
Updated:

ಎಸ್ಸೆಸ್ಸೆಲ್ಸಿಗೆ ಜಿಲ್ಲಾ ಮಟ್ಟದ ಪೂರ್ವಸಿದ್ಧತಾ ಪರೀಕ್ಷೆಗಳು ಈಗಾಗಲೇ ಆರಂಭಗೊಂಡಿವೆ. ಇದರೊಂದಿಗೆ, ರಾಜ್ಯ ಮಟ್ಟದ ಪೂರ್ವಸಿದ್ಧತಾ ಪರೀಕ್ಷೆ ಮುಂದಿನ ತಿಂಗಳ ಕೊನೆಯ ವಾರ ಜರುಗುವುದು ಸಾಮಾನ್ಯ. ಆದರೆ, ಕೆಲವು ಜಿಲ್ಲೆಗಳಲ್ಲಿ ಫಲಿತಾಂಶ ಸುಧಾರಣೆ ಹಾಗೂ ಜಿಲ್ಲಾವಾರು ಸ್ಥಾನದಲ್ಲಿ ಮೇಲಿನ ಹಂತ ತಲುಪಲು ಅವೈಜ್ಞಾನಿಕವಾಗಿ 5ರಿಂದ 6 ಪೂರ್ವಸಿದ್ಧತಾ ಪರೀಕ್ಷೆಗಳನ್ನು ಸಂಘಟಿಸುತ್ತಿರುವುದು ದುರದೃಷ್ಟಕರ.

ಉತ್ತಮ ಫಲಿತಾಂಶ ಪಡೆಯಬೇಕೆಂದು ವಿದ್ಯಾರ್ಥಿಗಳನ್ನು ಮಾನಸಿಕವಾಗಿ ಹಿಂಸಿಸುವುದು ಸರಿಯಲ್ಲ. ಹಲವು ಶಾಲೆಗಳು ಬೆಳಿಗ್ಗೆ 9ರಿಂದ ಸಂಜೆ 7ರ ತನಕ ವಿದ್ಯಾರ್ಥಿಗಳಿಗೆ ನಿರಂತರ ತರಗತಿಗಳನ್ನು ನಡೆಸುತ್ತಾ ಕೇವಲ ಅಂಕ ಗಳಿಕೆಯನ್ನೇ ಮುಖ್ಯ ಗುರಿಯನ್ನಾಗಿಸುತ್ತಿರುವುದು ನಮ್ಮ ಶಿಕ್ಷಣದ ಅವಸ್ಥೆಯನ್ನು ಎತ್ತಿ ತೋರಿಸುತ್ತದೆ.

ಎಸ್ಸೆಸ್ಸೆಲ್ಸಿಯಲ್ಲಿ ಉತ್ತೀರ್ಣರಾಗಲು ಅಂಕ ಗಳಿಕೆಯನ್ನೇ ಮಾನದಂಡವಾಗಿಸದ ಗ್ರೇಡಿಂಗ್ ಪದ್ಧತಿಯ ಅನುಷ್ಠಾನಕ್ಕೆ ಶಿಕ್ಷಣ ತಜ್ಞರು, ಮನೋವಿಜ್ಞಾನಿಗಳು ಸರ್ಕಾರದ ಮೇಲೆ ಒತ್ತಡ ಹೇರಬೇಕು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !