ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರು ಶುದ್ಧೀಕರಣ: ಗಂಭೀರವಾಗಿ ಪರಿಗಣಿಸಿ

ಅಕ್ಷರ ಗಾತ್ರ

ಕೊಳಚೆ ನೀರನ್ನು ಶುದ್ಧೀಕರಿಸದಿದ್ದರೆ ಜಲಮೂಲಗಳು ಎಷ್ಟು ಅಪಾಯಕಾರಿ ಸ್ಥಿತಿ ಎದುರಿಸಬೇಕಾಗು
ತ್ತದೆ ಎಂಬುದನ್ನು ವಿವರಿಸಿರುವ ಸಂಪಾದಕೀಯವನ್ನು (ಪ್ರ.ವಾ., ಮಾರ್ಚ್‌ 2) ಓದಿ ಆಘಾತವಾಯಿತು. ಪಂಚಭೂತಗಳಲ್ಲಿ ಒಂದಾದ ನೀರನ್ನು ದೈವೀಸ್ವರೂಪ ಎನ್ನುತ್ತೇವೆ. ಆದರೆ ಅಂಧಕಾರದ ಮಿಂಚಿನ ಓಟದಲ್ಲಿ ಪರಿಸರವನ್ನು ವೇಗವಾಗಿ ವಿನಾಶದ ಅಂಚಿಗೆ ತರುತ್ತಿದ್ದೇವೆ. ಉತ್ಪಾದನೆಯಾಗುತ್ತಿರುವ ಕೊಳಚೆ ನೀರಿನಲ್ಲಿ ಕೇವಲ ಶೇ 45ರಷ್ಟು ನೀರು ಶುದ್ಧವಾಗುತ್ತಿದೆ. ಇದಕ್ಕೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಮುಂದೊಂದು ದಿನ ಇಂದಿನ ಪೆಟ್ರೋಲ್ ಬೆಲೆಯನ್ನು ನೀರಿಗೆ ತೆರಬೇಕಾಗುತ್ತದೆ. ಯಾವ ಕೈಗಾರಿಕೆಗಳು ನೀರನ್ನು ಬಳಸಿಕೊಳ್ಳುತ್ತವೋ ಅವೇ ಕೈಗಾರಿಕೆಗಳು ನೀರನ್ನು ಶುದ್ಧೀಕರಿಸುವ ಹೊಣೆಯನ್ನು ಹೊತ್ತುಕೊಳ್ಳುವಂತೆ ಆಗಬೇಕು.

- ಶೈಲಾ ನಾಗರಾಜ್, ಹಾನಗಲ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT