ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಕರ ಜಾತಿ ನಮೂದಿಸುವ ಸಲ್ಲದ ನಡೆ

ಅಕ್ಷರ ಗಾತ್ರ

ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಮುಖ್ಯಗುರುಗಳ ಕೊಠಡಿಗಳಲ್ಲಿ ಶಾಲೆಯ ಒಟ್ಟು ಶಿಕ್ಷಕ ವೃಂದದ ಸಂಪೂರ್ಣ ಮಾಹಿತಿಯ ಫಲಕ ಇರುತ್ತದೆ. ಇದು ಸೂಕ್ತವಾದ ಕ್ರಮವಾದರೂ ಅದರಲ್ಲಿ ಒಂದು ದೋಷ ಎದ್ದು ಕಾಣುತ್ತದೆ. ಅದೆಂದರೆ, ಫಲಕದಲ್ಲಿ ಶಿಕ್ಷಕರು ಇಲಾಖೆಯ ಸೇವೆಗೆ ನೇಮಕಗೊಂಡ ದಿನಾಂಕ, ಸದ್ಯ ಕರ್ತವ್ಯ ನಿರ್ವಹಿಸುವ ಶಾಲೆಗೆ ಹಾಜರಾದ ದಿನಾಂಕ, ಜನ್ಮದಿನಾಂಕದ ಮಾಹಿತಿಯೊಂದಿಗೆ, ಶಿಕ್ಷಕರ ಜಾತಿಯನ್ನು ನಮೂದಿಸುವ ವಿಚಾರ ಸೂಕ್ಷ್ಮ ಮತ್ತು ಗಂಭೀರವಾದ ಸಂಗತಿಯಾಗಿದೆ. ಹೀಗೆ ಜಾತಿಯನ್ನು ನಮೂದಿಸುವುದು ಶಾಲಾ ಮಕ್ಕಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.

ಪೋಷಕರು ಅಥವಾ ಸಾರ್ವಜನಿಕರು ಶಾಲೆಯ ಕೆಲಸಕ್ಕೆ ಮುಖ್ಯಗುರುಗಳ ಕೊಠಡಿಗೆ ಬರುವುದು ಸಾಮಾನ್ಯ. ಕೊಠಡಿಯಲ್ಲಿ ಎದ್ದು ಕಾಣುವಂತಿರುವ ಈ ಫಲಕದ ಮೇಲೆ ಅವರು ಸಹಜವಾಗಿಯೇ ಕಣ್ಣು ಹಾಯಿಸುತ್ತಾರೆ. ಆಗ‘ಈ ಶಿಕ್ಷಕರು ನಮ್ಮ ಜಾತಿಯವರು, ಆ ಶಿಕ್ಷಕರು ಬೇರೆ ಜಾತಿಯವರು’ ಎಂಬಂತಹ ಮಾತುಗಳಿಗೆ ಇದು ಆಸ್ಪದ ನೀಡುತ್ತದೆ. ಹೀಗಾಗಿ, ಎಲ್ಲರೂ ಇಲ್ಲಿ ಸಮಾನರು, ಜಾತಿ- ಧರ್ಮ- ಪಕ್ಷ- ಬಣ್ಣ ಎಣಿಸದೆ ಎಲ್ಲ ಶಿಕ್ಷಕರನ್ನೂ ‘ಗುರುದೇವರು’ ಎಂಬ ಮನೋಭಾವದಲ್ಲಿ ನೋಡುವ ಪರಿಸ್ಥಿತಿ ನಿರ್ಮಿಸುವ ದಿಸೆಯಲ್ಲಿ ಈ ಮಾಹಿತಿಯನ್ನು ಪಟ್ಟಿ ಯಿಂದ ತೆಗೆದುಹಾಕುವುದು ಸೂಕ್ತ. ಜೊತೆಗೆ ಶಿಕ್ಷಕರ ಜನ್ಮದಿನಾಂಕವನ್ನು ನಮೂದಿಸುವುದೂ ಅನಗತ್ಯ. ಕೆಲವು ಶಿಕ್ಷಕರಿಗೆ ಇದು ಕಿರಿಕಿರಿ ಉಂಟುಮಾಡುವ ಸಾಧ್ಯತೆ ಇರುತ್ತದೆ. ಸಾರ್ವಜನಿಕ ಶಿಕ್ಷಣ ಇಲಾಖೆ ಈ ವಿಷಯದಲ್ಲಿ ದಿಟ್ಟ ನಿರ್ಧಾರ ತೆಗೆದುಕೊಳ್ಳಬೇಕು.

-ಆರ್.ಬಿ.ಜಿ.ಘಂಟಿ,ಅಮೀನಗಡ, ಬಾಗಲಕೋಟೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT