ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾನ ಮಾಡದವರಿಗೆ ರಜೆ ಬೇಡ

Last Updated 15 ಮಾರ್ಚ್ 2019, 20:00 IST
ಅಕ್ಷರ ಗಾತ್ರ

ಇನ್ನೇನು ಭಾರತದ ಸಾರ್ವತ್ರಿಕ ಚುನಾವಣೆಗಳು ಬಂದೇಬಿಟ್ಟವು. ಕರ್ನಾಟಕದಲ್ಲಿ ಮೊದಲ ಹಂತದ ಮತದಾನದ ದಿನಾಂಕದ ಹಿಂದೆ ಮುಂದೆ ಸತತ ರಜೆಗಳು ಬಂದಿರುವುದರಿಂದ, ಒಂದು ದೂರದ ಪ್ರವಾಸಕ್ಕೆ ಒಳ್ಳೆಯ ಅವಕಾಶ! ದಿನಾಂಕ ನಿಗದಿಯಲ್ಲಿ ಚುನಾವಣಾ ಆಯೋಗವನ್ನು ದೂಷಿಸುವುದಕ್ಕಿಂತ, ನಮ್ಮ ಜವಾಬ್ದಾರಿ-ಪ್ರಜ್ಞೆಗಳನ್ನು ಪ್ರಶ್ನಿಸಿಕೊಳ್ಳಬೇಕಿದೆ.

ಎಷ್ಟೆಲ್ಲ ಜಾಗೃತಿ ಮೂಡಿಸಿದರೂ, ಮತದಾರರು ಮತದಾನದ ಮಹತ್ವವನ್ನು ಮನಗಾಣದಿದ್ದರೆ ಎಲ್ಲವೂ ನಿಷ್ಪ್ರಯೋಜಕ. ಕಡ್ಡಾಯ ಮತದಾನದ ಬಗ್ಗೆ ಆಗೀಗ ಚರ್ಚೆಗಳು ನಡೆಯುತ್ತವಾದರೂ ಇನ್ನೂ ಸ್ಪಷ್ಟತೆ ಮೂಡಿಲ್ಲ. ಕೈಬೆರಳ ಮಾಸದ ಮಸಿಯಿಂದ ಮತದಾನ ಮಾಡಿದವರನ್ನು ಗುರುತಿಸಲು ಸುಲಭವಿರುವುದರಿಂದ, ಯಾರು ಮತದಾನ ಮಾಡಿಲ್ಲವೋ ಅಂಥವರಿಗೆ ಚುನಾವಣಾ ದಿನದಂದು ರಜೆಯನ್ನು ಮಂಜೂರು ಮಾಡಬಾರದು.

ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳಿಗೆ ಈ ಬಗ್ಗೆ ಚುನಾವಣಾ ಆಯೋಗವು ಸೂಚನೆ ನೀಡಿದಲ್ಲಿ, ಮತದಾನದ ಪ್ರಮಾಣ ಗಣನೀಯವಾಗಿ ಹೆಚ್ಚಬಹುದು. ಆಯೋಗವು ಈ ಒಂದು ಸಣ್ಣ ಪ್ರಯತ್ನ ಮಾಡಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT