ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರವಾಣಿ: ನಿವೃತ್ತಿ ವಯಸ್ಸು ಏರಿಕೆ, ಮಾರಕ ನಿರ್ಧಾರ

Last Updated 10 ಜನವರಿ 2022, 19:30 IST
ಅಕ್ಷರ ಗಾತ್ರ

ನಿವೃತ್ತಿ ವಯಸ್ಸು ಹೆಚ್ಚಿಸುವುದು ಯುವಪೀಳಿಗೆಗೆ ಮಾರಕವಾಗುವ ನಿರ್ಧಾರ. ಯಾವುದೇ ರಾಜ್ಯ ತನ್ನ ನೌಕರರ ನಿವೃತ್ತಿ ವಯಸ್ಸು ನಿಗದಿ ಮಾಡುವ ಮುನ್ನ ಸಮಾಜದ ಮೇಲೆ ಅದರಿಂದಾಗುವ ದುಷ್ಪರಿಣಾಮದ ಬಗ್ಗೆ ಅವಲೋಕಿಸ
ಬೇಕಿದೆ. ಸರ್ಕಾರಿ ನೌಕರರ ನಿವೃತ್ತಿ ವಯಸ್ಸು 55 ವರ್ಷ ಇದ್ದಾಗ ಸಮಾಜದಲ್ಲಿ ನಿರುದ್ಯೋಗ ಸಮಸ್ಯೆ ಇರಲಿಲ್ಲ. ಈ ಮಿತಿಯನ್ನು 58 ವರ್ಷಕ್ಕೆ ಏರಿಸಿದಾಗ ತಕ್ಕಮಟ್ಟಿಗೆ ನಿರುದ್ಯೋಗ ಸಮಸ್ಯೆ ಕಾಡಲಾರಂಭಿಸಿತು. ಅದನ್ನು 60 ವರ್ಷಕ್ಕೆ ಹೆಚ್ಚಿಸಿದಾಗ ಸಮಸ್ಯೆ ಉಲ್ಬಣಗೊಂಡಿದ್ದನ್ನು ಅಂಕಿಅಂಶಗಳೇ ದೃಢಪಡಿಸುತ್ತವೆ.

ಇದರ ನಡುವೆ ಆಂಧ್ರಪ್ರದೇಶ ಸರ್ಕಾರ ತನ್ನ ನೌಕರರ ನಿವೃತ್ತಿ ವಯಸ್ಸನ್ನು 62 ವರ್ಷಕ್ಕೆ ಹೆಚ್ಚಿಸಲು ಮುಂದಾಗಿರುವುದು ಉದ್ಯೋಗಾಕಾಂಕ್ಷಿ ಯುವಪೀಳಿಗೆಯ ಕನಸನ್ನು ನುಚ್ಚುನೂರು ಮಾಡುವಂತಿದೆ. ತಜ್ಞರ ವರದಿ ಇಲ್ಲದೆ, ನೌಕರರ ಓಲೈಕೆಗಾಗಿ ಏಕಾಏಕಿ ತೆಗೆದುಕೊಳ್ಳುವ ಇಂತಹ ನಿರ್ಧಾರಗಳು ಯುವಪೀಳಿಗೆಗಷ್ಟೇಅಲ್ಲದೆ ಸಮಾಜಕ್ಕೂ ಮಾರಕವಾಗಲಿವೆ. ನಿವೃತ್ತಿ ವಯಸ್ಸು ಹೆಚ್ಚಳದಿಂದ ಸಂಭ್ರಮಿಸುವ ನಿವೃತ್ತಿ ಅಂಚಿನಲ್ಲಿರುವ ನೌಕರರು ಯುವಪೀಳಿಗೆಗಾಗುವ ಉದ್ಯೋಗ ಸಮಸ್ಯೆ ಅರಿತು ಸ್ವತಃ ಈ ನೂತನ ಆದೇಶವನ್ನು ತಿರಸ್ಕರಿಸುವುದು ಒಳಿತು.

- ಚಂದ್ರಶೇಖರ ಪುಟ್ಟಪ್ಪ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT