ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣ ಹಕ್ಕು: ಹಿಂದಿನಂತೆ ಸಿಗಲಿ

Last Updated 28 ಆಗಸ್ಟ್ 2019, 20:15 IST
ಅಕ್ಷರ ಗಾತ್ರ

ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ) ಅಡಿ ಖಾಸಗಿ ಶಿಕ್ಷಣ ಸಂಸ್ಥೆಗಳು ದುರ್ಬಲರು, ಬಡವರು, ಶೋಷಿತರ ಮಕ್ಕಳಿಗೆ ಶೇ 25ರಷ್ಟು ಪ್ರವೇಶಾವಕಾಶ ನೀಡುವುದು ಕಡ್ಡಾಯವಾಗಿತ್ತು. ಇದರಿಂದ ಕೆಲವು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಿಗೆ ಅಸಮಾಧಾನವಾಗಿತ್ತು. ಲಕ್ಷಗಟ್ಟಲೆ ಡೊನೇಷನ್ ಪಡೆಯುವ ದಂಧೆಗೆ ಕಡಿವಾಣವೂ ಬಿತ್ತು. ಕಾಯ್ದೆ ಜಾರಿಯಿಂದಾಗಿ, ಆರ್ಥಿಕವಾಗಿ ಹಿಂದುಳಿದವರು, ಶೋಷಿತರು, ದುರ್ಬಲರುದೊಡ್ಡ ದೊಡ್ಡ ಶಿಕ್ಷಣ ಸಂಸ್ಥೆಗಳಲ್ಲಿ ಶ್ರೀಮಂತರ ಮಕ್ಕಳ ಸರಿಸಮನಾಗಿ ಕುಳಿತು, ಉಚಿತವಾಗಿ ಗುಣಾತ್ಮಕ ಶಿಕ್ಷಣ ಪಡೆಯುವಂತೆ ಆಗಿತ್ತು. ಆದರೆ ಈ ಹಿಂದಿನ ಸಮ್ಮಿಶ್ರ ಸರ್ಕಾರವು ಕೆಲ ಕಾರ್ಪೊರೇಟ್ ಶಿಕ್ಷಣ ಸಂಸ್ಥೆಗಳ ಒತ್ತಡಕ್ಕೆ ಮಣಿದು, ಕಾಯ್ದೆಗೆ ತಿದುಪ್ದಡಿ ತಂದಿತು. ಇದರಿಂದ ರಾಜ್ಯದಾದ್ಯಂತ ಪ್ರತಿವರ್ಷ ಆರ್‌ಟಿಇ ಅಡಿ ಪಡೆಯುತ್ತಿದ್ದ ಉಚಿತ ಶಿಕ್ಷಣಕ್ಕೆ ಕೊಡಲಿ ಪೆಟ್ಟು ಬಿದ್ದಂತಾಗಿದೆ.

ಲಕ್ಷಾಂತರ ಬಡ ಮಕ್ಕಳ ಭವಿಷ್ಯವು ಸದ್ಯ ರಾಜ್ಯ ಸರ್ಕಾರ ಕೈಗೊಳ್ಳುವ ನಿರ್ಧಾರದ ಮೇಲೆ ನಿಂತಿದೆ. ಮುಖ್ಯಮಂತ್ರಿ, ಶಿಕ್ಷಣ ಸಚಿವರು ಈ ಕುರಿತು ಪರಿಶೀಲಿಸಬೇಕಾಗಿದೆ. ಮೊದಲಿದ್ದ ನಿಯಮದಂತೆ ಕಾಯ್ದೆ ಜಾರಿಗೊಳಿಸಿದರೆ, ಎಷ್ಟೋ ಬಡ ಪಾಲಕರು ನಿಟ್ಟುಸಿರು ಬಿಡುವಂತಾಗುತ್ತದೆ.

–ಸಂತೋಷ ನವಲಗುಂದ ಮಳ್ಳಿ,ಯಡ್ರಾಮಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT