ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಎಲ್ಲ ರಾಷ್ಟ್ರಗಳ ಸಹಕಾರ ಅಗತ್ಯ

ಅಕ್ಷರ ಗಾತ್ರ

ರಷ್ಯಾ ಮತ್ತು ಉಕ್ರೇನ್‌ ನಡುವಿನ ಸಂಘರ್ಷ ಇಡೀ ಜಗತ್ತಿನ ಮೇಲೆ ಪರಿಣಾಮ ಬೀರಲಿದೆ. ಏಕೆಂದರೆ ಕಚ್ಚಾ ತೈಲ ಉತ್ಪಾದನೆ ಮಾಡುವ ಪ್ರಮುಖ ದೇಶಗಳಲ್ಲಿ ರಷ್ಯಾ ಕೂಡ ಒಂದು. ಹೀಗಾಗಿ, ತೈಲ ಬೆಲೆಯಲ್ಲಿ ಏರಿಕೆಯಾಗುವ ಸಂಭವ ಇರುತ್ತದೆ. ಇದು ಭಾರತದ ಮೇಲೆ ನೇರ ಪರಿಣಾಮ ಬೀರಬಲ್ಲದು.

ರಷ್ಯಾ ಅತಿ ಹೆಚ್ಚು ಶಸ್ತ್ರಾಸ್ತ್ರಗಳನ್ನು ಸಹ ರಪ್ತು ಮಾಡುವ ದೇಶವಾಗಿದೆ. ಜಗತ್ತು ಎರಡು ಬಣಗಳಾಗಿ, ಅಮೆರಿಕ ಮತ್ತು ರಷ್ಯಾದ ಪರ ನಿಲ್ಲುವ ಸಾಧ್ಯತೆ ಇದೆ. ಈಗಿನ ಸಂಘರ್ಷದಿಂದ ಜನರಲ್ಲಿ ಆತಂಕ ಮೂಡಿದ್ದು, ಶಾಂತಿ ನೆಲೆಸಲು ಎಲ್ಲಾ ರಾಷ್ಟ್ರಗಳು ಪ್ರಯತ್ನಿಸಬೇಕು. ಭಾರತವು ಶಾಂತಿ ಸ್ಥಾಪನೆಯ ನೇತೃತ್ವ ವಹಿಸುವುದು ಸೂಕ್ತ.

-ರಾಸುಮ ಭಟ್, ಚಿಕ್ಕಮಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT