ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ | ಹೃದಯಹೀನ ವರ್ತನೆ: ಕಠಿಣ ಶಿಕ್ಷೆ ಆಗಲಿ

Last Updated 18 ಜನವರಿ 2023, 21:04 IST
ಅಕ್ಷರ ಗಾತ್ರ

ದ್ವಿಚಕ್ರ ವಾಹನಕ್ಕೆ ಜೋತುಬಿದ್ದ ಮುತ್ತಪ್ಪ ಎನ್ನುವ ವೃದ್ಧರನ್ನು ಯುವಕನೊಬ್ಬ ರಸ್ತೆಯಲ್ಲೇ 600 ಮೀಟರ್‌ವರೆಗೆ ಎಳೆದೊಯ್ದ ದೃಶ್ಯವನ್ನು ಮಾಧ್ಯಮಗಳಲ್ಲಿ ನೋಡಿ ಕರುಳು ಹಿಚುಕಿದಷ್ಟು ಸಂಕಟವಾಯಿತು. ಇಂದಿನ ಯುವಜನಾಂಗದ ಮನಃಸ್ಥಿತಿ ಅದೆಷ್ಟು ಕ್ರೂರ ಎನಿಸಿತು. ಅವರೇಕೆ ಹೀಗೆ ಹೃದಯಹೀನರಾಗಿ ವರ್ತಿಸುತ್ತಿದ್ದಾರೆ?

ಇತರರಿಗೆ ಪಾಠ ಎನಿಸುವಂತಹ ಕಠಿಣ ಶಿಕ್ಷೆಯನ್ನು ಇಂತಹವರಿಗೆ ನೀಡಬೇಕು. ಕೆಲವು ಯುವಕರು ಹಣ, ಅಧಿಕಾರದ ಕಾರಣದಿಂದಾಗಿ ದುರಹಂಕಾರ ಬೆಳೆಸಿಕೊಂಡಿರುತ್ತಾರೆ. ಅಂಥವರಿಗೆ ರಾಜಕೀಯ ಕೃಪಾಕಟಾಕ್ಷವೂ ಇದ್ದರಂತೂ ಎಂತಹ ದುಷ್ಕೃತ್ಯ ಎಸಗಿದರೂ ಖುಲಾಸೆಯಾಗಿ ಹೊರಬರುತ್ತೇವೆ ಎಂಬ ಭಂಡ ಧೈರ್ಯ ಬಂದುಬಿಡುತ್ತದೆ. ಹೀಗಾಗಿ ಇಂತಹವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸಬೇಕು ಮತ್ತು ಗೂಂಡಾಪಟ್ಟಿಗೆ ಇವರ ಹೆಸರನ್ನು ಸೇರಿಸಬೇಕು.
ಲಲಿತಾ ರೆಡ್ಡಿ, ಕಲಬುರಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT