7

ಅಭಿವೃದ್ಧಿಗೆ ಬಳಕೆಯಾಗಲಿ

Published:
Updated:

ಸರ್ಕಾರಿ ಶಾಲೆಗಳ ಎಸ್‌ಡಿಎಂಸಿ ಖಾತೆಯಲ್ಲಿ ಜಮಾ ಆಗಿರುವ ಬಡ್ಡಿಯ ಹಣವನ್ನು ವಾಪಸ್‌ ಪಡೆಯಲು ಸರ್ಕಾರ ಮುಂದಾಗಿರುವುದು ಸರಿಯಲ್ಲ. ಸರ್ಕಾರಿ ಶಾಲೆಗಳ ಬಗ್ಗೆ ಪೋಷಕರು ಮೂಗು ಮುರಿಯಲು ಮುಖ್ಯ ಕಾರಣವೆಂದರೆ ಸೌಲಭ್ಯಗಳ ಕೊರತೆ. ಸೌಲಭ್ಯವಂಚಿತ ಶಾಲೆಗಳು ರಾಜ್ಯದಲ್ಲಿ ನೂರಾರು ಇರುವುದರಿಂದ ಬಡ್ಡಿಯ ಹಣವನ್ನು ಹಿಂಪಡೆಯುವ ಬದಲು ಅದನ್ನು ಶಾಲೆಗಳ ಅಭಿವೃದ್ಧಿಗೆ ಬಳಸಿದರೆ ಸರ್ಕಾರಿ ಶಾಲೆಗಳು ಮಕ್ಕಳನ್ನು ಆಕರ್ಷಿಸಬಲ್ಲವು.

ಸರ್ಕಾರವು ಎಸ್‌ಡಿಎಂಸಿಗಳಿಗೆ ಸುತ್ತೋಲೆ ಕಳುಹಿಸಿ, ಆ ಹಣವನ್ನು ಶಾಲೆಯ ಅಭಿವೃದ್ಧಿಗೆ ಬಳಸಿಕೊಳ್ಳುವಂತೆ ಸೂಚನೆ ನೀಡುವುದು ಅಗತ್ಯ.

–ನಯನ ಎಂ.ಆರ್., ಜೇವರ್ಗಿ

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !