ಸಮಾಜ ಹಿತಕಾರಿ ನಡೆ ಶ್ಲಾಘನೀಯ
ಕರ್ನಾಟಕದಾದ್ಯಂತ ತಾಲ್ಲೂಕು, ಜಿಲ್ಲಾ ನ್ಯಾಯಾಲಯಗಳು ಹಾಗೂ ಹೈಕೋರ್ಟ್ ಪೀಠಗಳು ಸೇರಿ ಒಟ್ಟು 1,100 ಕಡೆ ಇಂದು (ಸೆ. 19) ‘ಮೆಗಾ ಇ- ಲೋಕ್ ಅದಾಲತ್’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಇಷ್ಟು ಬೃಹತ್ ಪ್ರಮಾಣದ ‘ಜನತಾ ನ್ಯಾಯಾಲಯ’ ಪ್ರಕ್ರಿಯೆ, ಅದೂ ಏಕಕಾಲದಲ್ಲಿ ನಡೆಯುತ್ತಿರುವುದು ರಾಜ್ಯದ ನ್ಯಾಯಾಂಗ ಇತಿಹಾಸದಲ್ಲಿ ಇದೇ ಮೊದಲು. ಸಮಾಜದ ಸ್ವಾಸ್ಥ್ಯ, ನೆಮ್ಮದಿಗಾಗಿ ಅಗತ್ಯವಿರುವ ಶೀಘ್ರ ಮತ್ತು ವ್ಯಾಪಕ ನ್ಯಾಯದಾನವು ಜಾಗತಿಕ ಸ್ವಾಸ್ಥ್ಯ ಹಾನಿಯ ಈ ಸಂದರ್ಭದಲ್ಲಿ ಹಿಂದೆಂದಿಗಿಂತಲೂ ಹೆಚ್ಚುಉಪಯುಕ್ತ.
‘ಒಳಿತೊಂದೆ ಶಾಶ್ವತವೊ ಉಳಿದೆಲ್ಲವಳಿಯುವುದೊ’ ಎಂಬ ಡಿ.ವಿ.ಜಿ.ಯವರ ನುಡಿಯಂತೆ, ಕರ್ನಾಟಕ ನ್ಯಾಯಾಂಗದ ಈ ಸಮಾಜಹಿತಕಾರಿ ನಡೆಯು ಜನಮನದಲ್ಲಿ ಶಾಶ್ವತವಾಗಿ ಉಳಿಯುತ್ತದೆ. ಮಾತ್ರವಲ್ಲ, ನ್ಯಾಯಾಂಗದ ಮೇಲಿನ ಗೌರವವನ್ನು ಇಮ್ಮಡಿಗೊಳಿಸಿದೆ.
ಎಚ್.ಆನಂದರಾಮ ಶಾಸ್ತ್ರೀ, ಬೆಂಗಳೂರು
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.